ಕೊಲೆ ಆರೋಪಿ ಅಂದರ್…ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಕೊಲೆ ಆರೋಪಿ ಅಂದರ್…ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ನಂಜನಗೂಡು,ಸೆ7,Tv10 ಕನ್ನಡ

ಅಕ್ರಮ ಸಂಭಂಧ ಹಿನ್ನಲೆ ವ್ಯಕ್ತಿಯನ್ನ ಮೊಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ನಂಜನಗೂಡು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಮಹದೇವ ಶೆಟ್ಟಿ (45) ಬಂಧಿತ ಕೊಲೆ ಆರೋಪಿ.ಕೃತ್ಯ ನಡೆದ 24 ಗಂಟೆಯಲ್ಲಿ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ರಂಗಸ್ವಾಮಿ ಕೊಲೆಯಾದ ದುರ್ದೈವಿ.ನಂಜನಗೂಡು ತಾಲೂಕಿನ ಹಣಸನಾಳು ಗ್ರಾಮದಲ್ಲಿ ಘಟನೆ ನಡೆದಿತ್ತು.ಆರೋಪಿ ಮಹದೇವಶೆಟ್ಟಿ ಪತ್ನಿಯ ಜೊತೆ ರಂಗಸ್ವಾಮಿ ಅಕ್ರಮ ಸಂಭಂಧ ಇಟ್ಟುಕೊಂಡಿದ್ದನೆಂದು ಹೇಳಲಾಗಿದೆ.ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ.ನಿನ್ನೆಯೂ ಸಹ ಇದೇ ವಿಚಾರದಲ್ಲಿ ನಡೆದ ಜಗಳದ ವೇಳೆ ಮಹದೇವಶೆಟ್ಟಿ ಮೊಚ್ಚಿನಿಂದ ರಂಗಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ.ರಂಗಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರು.ಕೃತ್ಯದ ನಂತರ ಮಹದೇವಶೆಟ್ಟಿ ಪರಾರಿಯಾಗಿದ್ದ.ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಘಟನೆ ನಡೆದ 24 ಗಂಟೆ ಒಳಗೆ ಆರೋಪಿ ಮಹದೇವಶೆಟ್ಟಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…

Spread the love

Related post

ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ರಕ್ಷಿತ್ ಹೆಗಲಿಗೆ ಮಹತ್ತರ ಜವಾಬ್ದಾರಿ…

ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ…

ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ರಕ್ಷಿತ್ ಹೆಗಲಿಗೆ ಮಹತ್ತರ ಜವಾಬ್ದಾರಿ… ಮೈಸೂರು,ಜೂ9,Tv10 ಕನ್ನಡ ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಹಾಗೂ…
ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…? ನಂಜನಗೂಡು,ಜೂ7,Tv10 ಕನ್ನಡ ಸಾರ್ವಜನಿಕರಿಗೆ ಅನುಕೂಲವಾಗಿ ಪರಿಣಮಿಸಬೇಕಿದ್ದ ಗ್ರಾಮ ಪಂಚಾಯ್ತಿ ಕಾರ್ಯಾಲಯ ಸಿಬ್ಬಂದಿಗಳಿಲ್ಲದೆ ಬಣಗುಡುತ್ತಾ ಹಿಡಿಶಾಪಕ್ಕೆ ತುತ್ತಾಗಿದೆ.ಕೆಲಸ ಕಾರ್ಯಗಳಿಗೆ ಬರುವ ಜನ ಖಾಲಿ…
ಶಾಲಾ ದಾಖಲಾತಿ ತಿದ್ದಿದ ಆರೋಪ…ಮುಖ್ಯ ಶಿಕ್ಷಕ ಅಮಾನತು…

ಶಾಲಾ ದಾಖಲಾತಿ ತಿದ್ದಿದ ಆರೋಪ…ಮುಖ್ಯ ಶಿಕ್ಷಕ ಅಮಾನತು…

ಶಾಲಾ ದಾಖಲಾತಿ ತಿದ್ದಿದ ಆರೋಪ…ಮುಖ್ಯ ಶಿಕ್ಷಕ ಅಮಾನತು… ಎಚ್.ಡಿ.ಕೋಟೆ,ಜೂ4,Tv10 ಕನ್ನಡ ಸರ್ಕಾರಿ ಶಾಲಾ ದಾಖಲಾತಿಯಲ್ಲಿ ಬೋವಿ ಎಂಬುದನ್ನು ಬೋಯಿ ಎಂದು ತಿದ್ದಿದ ಆರೋಪದ ಹಿನ್ನಲೆ ಶಾಲೆ ಮುಖ್ಯಶಿಕ್ಷಕ ಅಮಾನತುಪಡಿಸಲಾಗಿದೆ.ಹೆಚ್.ಡಿ.ಕೋಟೆ…

Leave a Reply

Your email address will not be published. Required fields are marked *