ಕಳುವು ಮಾಲು ಮಾರಾಟ ಮಾಡಲು ಸಹಕರಿಸಿದ ಪ್ರಕರಣ…ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು ಸಸ್ಪೆಂಡ್…

ಕಳುವು ಮಾಲು ಮಾರಾಟ ಮಾಡಲು ಸಹಕರಿಸಿದ ಪ್ರಕರಣ…ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು ಸಸ್ಪೆಂಡ್…

ಮೈಸೂರು,ಸೆ7,Tv10 ಕನ್ನಡ

ಕಳುವು ಮಾಡಿದ ಚಿನ್ನಾಭರಣಗಳನ್ನ ಮಾರಾಟ ಮಾಡಲು ಸಹಕರಿಸಿದ ಆರೋಪದ ಮೇಲೆ ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು ಅಮಾನತುಪಡಿಸಿ ಆದೇಶ ಹೊರಡಿಸಲಾಗಿದೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿತ್ತು.ವಿಚಾರಣೆ ವೇಳೆ ದೇವರಾಜ,ಶ್ರೀರಂಗಪಟ್ಟಣ,ವಿದ್ಯಾರಣ್ಯಪುರಂ ಸೇರಿದಂತೆ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಪ್ರಕರಣಗಳು ಪತ್ತೆಯಾಗಿತ್ತು.ಕಳುವು ಮಾಲುಗಳನ್ನ ವಶಪಡಿಸಿಕೊಳ್ಳಲು ವಿಚಾರಣೆ ನಡೆಸಿದ ವೇಳೆ ಆರೋಪಿಗಳ ಜೊತೆ ಅಶೋಕಾಪುರಂ ಠಾಣೆಯ ಮುಖ್ಯಪೇದೆ ರಾಜು ನಂಟಿರುವುದು ಬೆಳಕಿಗೆ ಬಂದಿದೆ.ಅಲ್ಲದೆ ಕಳುವು ಪದಾರ್ಥಗಳನ್ನ ಮಾರಾಟ ಮಾಡಲು ಸಹಕರಿಸಿದ್ದ ಎಂಬ ಮಾಹಿತಿಯೂ ಖಚಿತವಾಗಿದೆ.ಈ ಆರೋಪದ ಮೇಲೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ರವರು ರಾಜುನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ…

Spread the love

Related post

ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ರಕ್ಷಿತ್ ಹೆಗಲಿಗೆ ಮಹತ್ತರ ಜವಾಬ್ದಾರಿ…

ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ…

ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ರಕ್ಷಿತ್ ಹೆಗಲಿಗೆ ಮಹತ್ತರ ಜವಾಬ್ದಾರಿ… ಮೈಸೂರು,ಜೂ9,Tv10 ಕನ್ನಡ ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಹಾಗೂ…
ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…? ನಂಜನಗೂಡು,ಜೂ7,Tv10 ಕನ್ನಡ ಸಾರ್ವಜನಿಕರಿಗೆ ಅನುಕೂಲವಾಗಿ ಪರಿಣಮಿಸಬೇಕಿದ್ದ ಗ್ರಾಮ ಪಂಚಾಯ್ತಿ ಕಾರ್ಯಾಲಯ ಸಿಬ್ಬಂದಿಗಳಿಲ್ಲದೆ ಬಣಗುಡುತ್ತಾ ಹಿಡಿಶಾಪಕ್ಕೆ ತುತ್ತಾಗಿದೆ.ಕೆಲಸ ಕಾರ್ಯಗಳಿಗೆ ಬರುವ ಜನ ಖಾಲಿ…
ಶಾಲಾ ದಾಖಲಾತಿ ತಿದ್ದಿದ ಆರೋಪ…ಮುಖ್ಯ ಶಿಕ್ಷಕ ಅಮಾನತು…

ಶಾಲಾ ದಾಖಲಾತಿ ತಿದ್ದಿದ ಆರೋಪ…ಮುಖ್ಯ ಶಿಕ್ಷಕ ಅಮಾನತು…

ಶಾಲಾ ದಾಖಲಾತಿ ತಿದ್ದಿದ ಆರೋಪ…ಮುಖ್ಯ ಶಿಕ್ಷಕ ಅಮಾನತು… ಎಚ್.ಡಿ.ಕೋಟೆ,ಜೂ4,Tv10 ಕನ್ನಡ ಸರ್ಕಾರಿ ಶಾಲಾ ದಾಖಲಾತಿಯಲ್ಲಿ ಬೋವಿ ಎಂಬುದನ್ನು ಬೋಯಿ ಎಂದು ತಿದ್ದಿದ ಆರೋಪದ ಹಿನ್ನಲೆ ಶಾಲೆ ಮುಖ್ಯಶಿಕ್ಷಕ ಅಮಾನತುಪಡಿಸಲಾಗಿದೆ.ಹೆಚ್.ಡಿ.ಕೋಟೆ…

Leave a Reply

Your email address will not be published. Required fields are marked *