ಈದ್ ಮಿಲಾದ್…ಶಾಂತಿಯುತ ಆಚರಣೆಗೆ ಪೊಲೀಸರ ಕರೆ…ರೂಟ್ ಮಾರ್ಚ್ ಮೂಲಕ ಅಭಯ…
- MysoreTV10 Kannada Exclusive
- September 14, 2024
- No Comment
- 176
ಮೈಸೂರು,ಸೆ14,Tv10 ಕನ್ನಡಶಾಂತಿಯುತವಾಗಿ ಈದ್ ಮಿಲಾದ್ ಹಬ್ಬವನ್ನ ಆಚರಿಸಲು ಮೈಸೂರು ಖಾಕಿ ಪಡೆ ಕರೆ ನೀಡಿದೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಡಿಸಿಪಿ ರವರಾದಮುತ್ತುರಾಜ್ ಹಾಗೂ ಜಾಹ್ನವಿ ರವರ ನೇತೃತ್ವದಲ್ಲಿ ಇಂದು ಪಥಸಂಚಲನ ನಡೆಸಿ ಈದ್ ಮಿಲಾದ್ ಹಬ್ಬವನ್ನಶಾಂತಿಯುತವಾಗಿ ಆಚರಿಸಲು ಸಹಕರಿಸುವಂತೆ ಸಾರ್ವಜನಕರಿಗೆ ಸಂದೇಶ ರವಾನಿಸಿದ್ದಾರೆ. ಹಿನ್ನೆಲೆಯಲ್ಲಿ
ಲಷ್ಕರ್, ಮಂಡಿ ಹಾಗು ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರೂಟ್ ಮಾರ್ಚ್ ನಡೆಸಿ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.ಸೂಕ್ಷ್ಮ ಪ್ರದೇಶಗಳಲ್ಲಿ ಸಂಚರಿಸಿದ ಪೊಲೀಸರು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ.ಇಂದಿನ ರೂಟ್ ಮಾರ್ಚ್ ನಲ್ಲಿ ಎಸಿಪಿ,ಇನ್ಸ್ಪೆಕ್ಟರ್ ಗಳು,ಸಬ್ ಇನ್ಸ್ಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದಾರೆ…