ಪಾರ್ಟ್ ಟೈಂ ಜಾಬ್ ಆಮಿಷ…30.48 ಲಕ್ಷಕ್ಕೆ ಉಂಡೆನಾಮ…
- MysoreTV10 Kannada Exclusive
- September 14, 2024
- No Comment
- 42
ಮೈಸೂರು,ಸೆ14,Tv10 ಕನ್ನಡ
ಪಾರ್ಟ್ ಜಾಬ್ ಆಮಿಷ ತೋರಿಸಿ ಯುವಕನಿಂದ 30.48 ಲಕ್ಷಕ್ಕೆ ಉಂಡನಾಮ ಹಾಕಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ರಾಮಕೃಷ್ಣನಗರದ ವಿಠಲ್ ಚೌಹಾಣ್ (24) ಎಂಬಾತ ಹಣ ಕಳೆದುಕೊಂಡ ಯುವಕ.ಇನ್ಸ್ಟಾಗ್ರಾಂ ನಲ್ಲಿ ಪಾರ್ಟ್ ಟೈಂ ಜಾಬ್ ಬಗ್ಗೆ ಮೆಸೇಜ್ ಬಂದಿದೆ.ಆಸಕ್ತಿಯಿಂದ ಕಾಂಟ್ಯಾಕ್ಟ್ ಮಾಡಿದ್ದಾರೆ.ಪ್ರಾರಂಭದಲ್ಲಿ 1250/- ರೂ ವರ್ಗಾಯಿಸಿಕೊಂಡಿದ್ದಾರೆ.ನಂತರ ಇನ್ವೆಸ್ಟ್ ಮೆಂಟ್ ಹೆಸರಲ್ಲಿ ಹಂತಹಂತವಾಗಿ 38.48,986/ ರೂ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.ಅನುಷಾ ಎಂಬ ಹೆಸರಿನಲ್ಲಿ ವಂಚನೆ ನಡೆದಿದೆ…