ಶ್ರೀ ಯೋಗಾ ನರಸಿಂಹಸ್ವಾಮಿ ಸನ್ನಿಧಾನದಲ್ಲಿ `ಪವಿತ್ರೋತ್ಸವ’ ಸಂಭ್ರಮ…ಸಾವಿರಾರು ಭಕ್ತರು ಭಾಗಿ…

ಶ್ರೀ ಯೋಗಾ ನರಸಿಂಹಸ್ವಾಮಿ ಸನ್ನಿಧಾನದಲ್ಲಿ `ಪವಿತ್ರೋತ್ಸವ’ ಸಂಭ್ರಮ…ಸಾವಿರಾರು ಭಕ್ತರು ಭಾಗಿ…

ಮೈಸೂರು,ಸೆ15,Tv10 ಕನ್ನಡ

ಮೈಸೂರು ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಪವಿತ್ರೋತ್ಸವ ವಿಶೇಷ ಪೂಜಾ ಮಹೋತ್ಸವವ

ನಡೆಯುತ್ತಿದೆ.ಬಾದ್ರಪದ, ಶುಕ್ಲ ಏಕಾದಶಿಯಿಂದ ಆರಂಬಿಸಿ, ಕೃಷ್ಣ ದ್ವಿತೀಯೇವರೆಗೂ ಪವಿತ್ರೋತ್ಸವ ಸ್ವಾಮಿಯ ಸನ್ನಿಧಾನದಲ್ಲಿ ಜರುಗಲಿದೆ.. ಪವಿತ್ರ ಎಂದರೇ ಶುದ್ದವಾಗಿರುವುದು, ಉತ್ಸವ ಎಂದರೇ ಹಬ್ಬ, ಜಾತ್ರೆಯೆಂದೇ ಅರ್ಥವಾಗಿದೆ.ಹೆಸರಲ್ಲೇ ತಿಳಿಸಿರುವಂತೆ ಲೋಕದಲ್ಲಿ ಇರುವಂತಹ ದುಷ್ಟಶಕ್ತಿಗಳು ಯಾವುದಾದರೂ ಪಾತಕಾದಿಗಳು ಜರುಗಿದ್ದಲ್ಲಿ ಈ ಉತ್ಸವ ಆಚರಣೆಯಿಂದಾಗಿ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ದೇವಾಲಯದ ಆಡಳಿತಾಧಿಕಾರಿ ಶ್ರೀ ಎನ್.ಶ್ರೀನಿವಾಸನ್ ಈ ಉತ್ಸವದ ಬಗ್ಗೆ ಮಾಹಿತಿ ನೀಡಿದರು. ಈ ಉತ್ಸವ ಉಲ್ಲೇಖ ನಮಗೆ ಅಗ್ನಿಪುರಾಣ ಹಾಗೂ ಗರುಡ ಪುರಾಣಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ.ಪಂಚಾರಾತ್ರಗಮದಲ್ಲಿ ಪ್ರಸಿದ್ಧ ಸಂಹಿತೆಯಾದ ಜಯಕ್ಯ ಸಂಹಿತೆಯಲ್ಲಿ ಸರ್ವದೋಶ ನಿವಾರಣೆ ಈ ಉತ್ಸವದದಲ್ಲಿ ಪ್ರಮುಖ ಅಂಶವಾಗಿದೆ ಎಂದು ವಿವರಿಸಿದರು.
ಎಲ್ಲರಿಗೂ ಶಾಂತಿ, ಸಂತೋಷ, ಕಲ್ಯಾಣ ಎಲ್ಲವೂ ಲಭಿಸಲಿ ಎಂಬ ಉದ್ದೇಶದಿಂದ ಸುದರ್ಶನ ನಾರಸಿಂಹ ಕ್ಷೇತ್ರಗಳಲ್ಲಿ ಅಂಕನಾರ್ಪಣದಿಂದ ತೊಡಗಿ ಯಾಗಶಾಲ ಮಂಡಲರಾಧನೆಯೊಂದಿಗೆ ಭಗವಂತನಿಗೆ (ಯೋಗಾನರಸಿಂಹ ಸ್ವಾಮಿಯವರಿಗೆ) ಶುದ್ಧವಾದ ರೇಷ್ಮೇಯಿಂದ ಮಾಡಲ್ಪಟ್ಟ ಮಾಲೆಗಳನ್ನು ಪವಿತ್ರೀಕರಿಸಿ ಧರಿಸಲಾಗುವುದು ಎಂದರು. ಇದರಿಂದಾಗಿ ಜಗತ್ತಿಗೆ ಕ್ಷೇಮ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಸರ್ವದೋಷ ನಿವಾರಣೆ, ಸರ್ವಯಜ್ಞ ಫಲಪ್ರದ, ಸರ್ವದೋಷ ಉಪಶಮನ, ಸರ್ವ ಸುಷ್ಠಿಕರ, ಸರ್ವ ಕಾಮಪ್ರದ ಮತ್ತು ಸರ್ವ ಲೋಕಶಾಂತಿ ಈ ಪವಿತ್ರೋತ್ಸವದಿಂದ ಲಭಿಸಲಿದ್ದು, ಭಕ್ತಾದಿಗಳು ಆಗಮಿಸಿ, ಈ ಉತ್ಸವದಲ್ಲಿ ಪಾಲ್ಗೊಂಡು ಯೋಗಾನರಸಿಂಹ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದರು.
ಈ ಸಂದರ್ಭದಲ್ಲಿ ತಿಳಿಸಿದರು. ದೇವಾಲಯದ ಸಂಸ್ಥಾಪರಾದ ಶ್ರೀ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರ ನೇತೃತ್ವದಲ್ಲಿ ಪವಿತ್ರೋತ್ಸವದ ಪೂಜಾ ಕೈಂಕರ್ಯಗಳು ನಡೆಯಿತು. ಇದೇ ವೇಳೆ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

Spread the love

Related post

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ.. ಮೈಸೂರು,ಅ15,Tv10 ಕನ್ನಡ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನಲೆ ಕಾಮುಕನಿಗೆ ಶಿಕ್ಷೆ ಪ್ರಕಟವಾಗಿದೆ.ಮೈಸೂರು…

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್ ಮೈಸೂರು,ಅ13,Tv10 ಕನ್ನಡ ದಸರಾ ವೇಳೆ ಅನಾಹುತ ಸೃಷ್ಠಿಸುವುದಾಗಿ ಅನಾಮಧೇಯ ವ್ಯಕ್ತಿ ಬೆದರಿಕೆ ಸಂದೇಶ ಪೋಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಈ…
ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…

Leave a Reply

Your email address will not be published. Required fields are marked *