ಗ್ರಾ.ಪಂ.ಉಪಾಧ್ಯಕ್ಷೆ ಪತಿ ಕೊಲೆ ಪ್ರಕರಣ…ಮತ್ತೋರ್ವ ಆರೋಪಿ ಬಂಧನ…ರೌಡಿ ಶೀಟರ್ ಧನರಾಜ್ ಭೋಲಾ ಅಂದರ್…
- TV10 Kannada Exclusive
- October 25, 2024
- No Comment
- 227
ನಂಜನಗೂಡು,ಅ25,Tv10 ಕನ್ನಡ
ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಪತಿ ನಂಜುಂಡಸ್ವಾಮಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಬಂಧಿಸಲಾಗಿದೆ.ಈಗಾಗಲೇ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನ ಬಙಧಿಸಿದ್ದ ಪೊಲೀಸರು ನಿನ್ನೆ ರಾತ್ರಿ ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ.ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಬಂಧಿತರ ಸಂಖ್ಯೆ 5 ಕ್ಕೆ ಏರಿದೆ.
ನಂಜನಗೂಡಿನ ರೌಡಿಶೀಟರ್ ಧನರಾಜ್ ಭೋಲಾ ಬಂಧಿತ ಅರೋಪಿ.ಈ ಹಿಂದೆ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಧನರಾಜ್ ಭೋಲಾ ಜೈಲು ವಾಸ ಅನುಭವಿಸಿದ್ದ.ಇದೀಗ ನಂಜುಂಡಸ್ವಾಮಿ ಕೊಲೆ ಪ್ರಕರಣದಲ್ಲಿ ಇದೇ ಧನರಾಜ್ ಭೋಲಾ ಭಾಗಿಯಾಗಿ ಪೊಲೀಸರ ಅತಿಥಿಯಾಗಿದ್ದಾನೆ.
ದೇವರಸನ ಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಸುಮತಿ ಅವಧಿ ಮುಗಿದಿದ್ದು ಒಪ್ಪಂದದ ಪ್ರಕಾರ ಉಪಾಧ್ಯಕ್ಷೆಯಾಗಿದ್ದ ನಂಜುಂಡಸ್ವಾಮಿ ಪತ್ನಿ ಸೌಭಾಗ್ಯ ರವರಿಗೆ ಅಧಿಕಾರ ನೀಡಬೇಕಿತ್ತು.ಆದರೆ ಈ ವಿಚಾರದಲ್ಲಿ ಸುಮತಿ ಸಂಭಂಧಿ ಹಾಗೂ ಹಾಲಿ ಸದಸ್ಯ ಗೋವರ್ಧನ್ ಅಡ್ಡಗಾಲು ಹಾಕಿ ಅಧಿಕಾರ ನೀಡಲು ಕ್ಯಾತೆ ತೆಗೆದಿದ್ದ.ಅಕ್ಟೋಬರ್ 6 ರಂದು ಇದೇ ವಿಚಾರವಾಗಿ ಮಾತನಾಡಲು ನಂಜುಂಡಸ್ವಾಮಿ ಹಣದ ಸಮೇತ ತೆರಳಿದ್ದಾರೆ.ಗೋವರತಧನ್ ಹಾಗೂ ಇತರರನ್ನ ಭೇಟಿ ಮಾಡಿದ್ದಾರೆ.ಆ ದಿನ ರಾತ್ರಿ ನಂಜುಂಡಸ್ವಾಮಿ ಮನೆಗೆ ಹಿಂದಿರುಗಿಲ್ಲ.ಮರುದಿನ ಜಮೀನೊಂದರಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದಾರೆ.ಆಸ್ಪತ್ರೆಗೆ ಸಾಗಿಸುವ ವೇಳೆ ನಂಜುಂಡಸ್ವಾಮಿ ಮೃತಪಟ್ಟಿದ್ದಾರೆ.
ನಂಜುಂಡಸ್ವಾಮಿ ಸಾವು ಅನುಮಾನಾಸ್ಪದವಾಗಿದೆ ಎಂದು ಪತ್ನಿ ಸೌಭಾಗ್ಯ ಪೊಲೀಸ್ ಠಾಣೆಯಲ್ಲಿ ಗೀವರ್ಧನ್ ವಿರುದ್ದ ದೂರು ನೀಡಿ ಕೊಲೆ ಎಂದು ಆರೋಪಿಸಿದ್ದರು.ಮತ್ತೊಂದೆಡೆ ಆರೋಪ ಹೊತ್ತ ಗೋವರ್ಧನ್ ಇದು ಅಪಘಾತ ಎಂದು ಬಿಂಬಿಸಿ ಪೊಲೀಸರನ್ನೇ ದಿಕ್ಕಿ ತಪ್ಪಿಸುವಂತೆ ಮಾಡಿದ್ದ.ಆದ್ರೆ ಸಂಚಾರಿ ಠಾಣೆ ಪೊಲೀಸರು ಕೂಲಂಕುಷವಾಗು ಪರಿಶೀಲನೆ ನಡೆಸಿದಾಗ ಅನುಮಾನದ ಹುತ್ತ ದಟ್ಟವಾಗಿ ಕಾಣಿಸಿತ್ತು.ಜೊತೆಗೆ ಉಪ್ಪಾರ ಜನಾಂಗದ ಮುಖಂಡರು ಕೊಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ನಂಜನಗೂಡು ಗ್ರಾಮಾಂತರ ಠಾಣೆಗೆ ಮುತ್ತಿಗೆ ಹಾಕಿದ್ದರು.ಪ್ರಕರಣ ದಾಖಲಿಸಿಕೊಂಡು ತೆನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆ ಎಂದು ಖಚಿತವಾಗಿ ಗೋವರ್ಧನ್ ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಸತ್ಯತೆ ಹೊರಬಿದ್ದಿತು.ಕೂಡಲೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜಾಹಿರ್,ಮಣಿಕಙಠ ಹಾಗೂ ಮಹೇಂದ್ರ ಸೇರಿದಂತೆ ನಾಲ್ವರನ್ನ ಬಂಧಿಸಿದ್ದರು.ಇದೀಗ 5 ನೇ ಆರೋಪಿ ಧನರಾಜ್ ಭೋಲಾನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ…