
ಆರ್ಥಿಕ ನೆರವಿಗಾಗಿ ಮನವಿ ಮಾಡಿದ ಪುಸ್ತಕ ಪ್ರೇಮಿ…ನೆರವಿಗೆ ಧಾವಿಸಿದ ಕನ್ನಡ ಪ್ರೇಮಿಗಳು…
- TV10 Kannada Exclusive
- October 25, 2024
- No Comment
- 116

ಮೈಸೂರು,ಅ25,Tv10 ಕನ್ನಡ
ಭಾಷೆಗೆ ಎಲ್ಲೆ ಇಲ್ಲ ಪುಸ್ತಕ ಪ್ರೇಮಕ್ಕೆ ಕೊನೆ ಇಲ್ಲ ಎಂಬ ನಾಣ್ಣುಡಿಗೆ ಉದಾಹರಣೆಯಾದ ಉದಯಗಿರಿಯ ಸೈಯದ್ ಇಸಾಕ್ ಲೈಬ್ರರಿಗೆ ಆರ್ಥಿಕ ನೆರವು ಬೇಕಿದೆ.ಇಳಿ ವಯಸ್ಸಿನಲ್ಲಿ ತಮ್ಮ ಸ್ವಂತ ದುಡಿಮೆಯಲ್ಲಿ ಸಾರ್ವಜನಿಕ ಗ್ರಂಥಾಲಯವನ್ನ ತೆರೆದು ಕನ್ನಡ ಹೂರಣವನ್ನ ಪಸರಿಸುತ್ತಿರುವ ಸೈಯದ್ ಇಸಾಕ್ ತಮ್ಮ ಲೈಬ್ರರಿಯನ್ನ ಉಳಿಸಿಕೊಡುವಂತೆ ಕನ್ನಡ ಪ್ರೇಮಿಗಳಿಗೆ ಮನವಿ ಮಾಡಿದ್ದಾರೆ.ಸ್ವಂತ ಖರ್ಚಿನಿಂದ ಸ್ಥಾಪನೆಯಾದ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳ ಸಂಗ್ರಹವಿದೆ.ಕನ್ನಡವನ್ನ ಉಳಿಸಿ ಬೆಳೆಸಿದ ಸಾಹಿತಿಗಳ ಭಾವಚಿತ್ರಗಳು ಕನ್ನಡ ಪ್ರೇಮಿಗಳನ್ನ ಸೆಳೆಯುತ್ತಿವೆ.ಕನ್ನಡ ದಿನ ಪತ್ರಿಕೆಗಳು ಕನ್ನಡಿಗರಿಗೆ ಜ್ಞಾನವನ್ನ ಹಂಚುತ್ತಿದೆ.ಹಲವಾರು ವರ್ಷಗಳಿಂದ ತಮ್ಮದೇ ಆದ ಶೈಲಿಯಲ್ಲಿ ಗ್ರಂಥಾಲಯದ ಮೂಲಕ ಕನ್ನಡ ಸೇವೆ ಮಾಡಿಕೊಂಡು ಬಂದಿರುವ ಸೈಯದ್ ಇಸಾಕ್ ತಮ್ಮ ಲೈಬ್ರರಿ ಉಳಿಸಲು ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ.ಕೆಲವೇ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಸಂಧರ್ಭದಲ್ಲಿ ಕನ್ನಡಿಗರು ಸೈಯದ್ ಇಸಾಕ್ ರವರ ಗ್ರಂಥಾಲಯ ಉಳಿವಿಗಾಗಿ ಒತ್ತು ನೀಡಬೇಕಿದೆ.
ಈ ಮಾಹಿತಿ ಅರಿತ ಕನ್ನಡ ಪ್ರೇಮಿಗಳು ಮತ್ತು ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕನ್ನಡಪರ ಸಂಘಟನೆಗಳು ನೆರವಿಗೆ ಮುಂದಾಗಿವೆ.ಜೀವಧಾರ ರಕ್ತನಿಧಿ ಕೇಂದ್ರವು ಸೈಯದ್ ಲೈಬ್ರೆರಿಯ ವಿದ್ಯುತ್ ಬಿಲ್ ಹಾಗೂ ಪತ್ರಿಕೆಗೆ ಸಹಾಯ ಮಾಡಲು ಮುಂದಾಗಿದೆ. ಜೀವದಾರರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಮಹಾನ್ ಶ್ರೇಯಸ್ ಹಾಗೂ ಇನ್ನಿತರರು ಗ್ರಂಥಾಲಯಕ್ಕೆ ಭೇಟಿ ನೀಡಿ ಸೈಯದ್ ಇಸಾಕ್ ರವರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ…