ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ನಿಂದ ತಡೆಯಾಜ್ಞೆ…
- TV10 Kannada Exclusive
- October 25, 2024
- No Comment
- 26
ನಂಜನಗೂಡು,ಅ25,Tv10 ಕನ್ನಡ
ಇದೇ ತಿಂಗಳು 28 ರಂದು ನಡೆಯಬೇಕಿದ್ದ ನಂಜನಗೂಡು ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ನಂಜನಗೂಡಿನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ,ಎಂ,ಎಫ್,ಸಿ ಇಂದು ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿದೆ.
ಅರ್ಜಿದಾರರಾದ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ನಂಜನಗೂಡು ತಾಲ್ಲೂಕಿನ ಅಧ್ಯಕ್ಷರಾದ ಎನ್. ಹರೀಶ್ ಕುಮಾರ್ ರವರು ತಮ್ಮ ಅರ್ಜಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಂಜನಗೂಡು ಶಾಖೆಯವರು ಬೈಲಾ ನಿಯಮಾವಳಿ ಉಲ್ಲಂಘನೆ ಮಾಡಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮತಕ್ಷೇತ್ರ ಹಂಚಿಕೆ ಮಾಡಿಕೊಂಡು ಮತ್ತು ಮತದಾರ ಪಟ್ಟಿಯಲ್ಲಿ ಲೋಪವೆಸಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕೋರ್ಟ್ ಮೊರೆ ಹೋಗಿದ್ದರು, ಈ ವಾದವನ್ನು ಆಲಿಸಿದ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ,ಎಂ,ಎಫ್,ಸಿ ನ್ಯಾಯಾಲಯ ಚುನಾವಣೆಗೆ ತಡೆಯಾಜ್ಞೆ ನೀಡಿದೆ
ಕಳೆದ 2013-2018 ಹಾಗೂ 2019-2024 ರ ಸಾಲಿನಲ್ಲಿ ಇ, ಎಸ್.ಐ ಇಲಾಖೆ ಮತಕ್ಷೇತ್ರದಲ್ಲಿ ಎನ್.ಹರೀಶ್ ಕುಮಾರ್ ರವರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.ಆದರೆ ಈ ಬಾರಿ ಅಂದರೆ 2024-2029 ನಡೆಯಲಿರುವ ಇ, ಎಸ್,ಐ ಇಲಾಖೆ ಮತಕ್ಷೇತ್ರವನ್ನು ತೆಗೆದು ಹಾಕಿ, ಅವೈಜ್ಞಾನಿಕವಾಗಿ ಆರೋಗ್ಯ ಇಲಾಖೆ ಮತದಾರ ಪಟ್ಟಿಗೆ ಸೇರಿಸಲಾಗಿದ್ದು.
ಇ, ಎಸ್ ಐ ಇಲಾಖೆ ಕಾರ್ಮಿಕ ಇಲಾಖೆ ಅಡಿಯಲ್ಲಿ ಬರುತ್ತಿದ್ದು, ಆರೋಗ್ಯ ಇಲಾಖೆಗೂ ಇ, ಎಸ್ ಐ ಇಲಾಖೆಗೂ ಸಂಬಂಧವೇ ಇಲ್ಲ, ಅಷ್ಟೇ ಅಲ್ಲದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬೈಲಾದ ನಿಯಮಾವಳಿ ಪ್ರಾತಿನಿಧ್ಯ ನೀಡದ ಇಲಾಖೆಗಳಿಗೆ ಮೂರು ಸ್ಥಾನಗಳು ಮೀಸಲಿದ್ದು, ಆ ಸ್ಥಾನಗಳಲ್ಲಿಯೂ ಸಹ ಇ,ಎಸ್,ಐ ಇಲಾಖೆಗೆ ಪ್ರಾತಿನಿಧ್ಯ ನೀಡದೆ ವಂಚಿಸಲಾಗಿದೆ ಎಂದು ಈ ಬಗ್ಗೆ ಅರ್ಜಿದಾರರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು.ಆದರೂ ಸಹ ಈ ಆಕ್ಷೇಪಣೆಯನ್ನು ಲೆಕ್ಕಿಸದೇ ಈಗಾಗಲೇ ಪ್ರಾತಿನಿಧ್ಯ ನೀಡಿರುವ ಇಲಾಖೆಗಳಿಗೆ ಹೆಚ್ಚುವರಿ ಸ್ಥಾನಗಳನ್ನು ನೀಡಿ, ಇ,ಎಸ್,ಐ ಗೆ ಕ್ಷೇತ್ರವನ್ನೇ ಹಂಚದೇ ಬೈಲಾವನ್ನು ಉಲ್ಲಂಘನೆ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಹೀಗಾಗಿ ಅಕ್ಟೋಬರ್ 28 ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಂಜನಗೂಡು ಶಾಖೆಯ ಚುನಾವಣೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ನಂಜನಗೂಡಿನ ವಕೀಲರಾದ ಗೋಳೂರು ಆರ್. ಪ್ರಸನ್ನರವರು ವಾದ ಮಂಡಿಸಿದ್ದರು…