ಸಂಶೋಧನಾ ಶಿಷ್ಯ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಎಸ್.ಸಿ.ಎಸ್.ಟಿ ವಿಧ್ಯಾರ್ಥಿಗಳಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ…
- TV10 Kannada Exclusive
- November 27, 2024
- No Comment
- 94
ಮೈಸೂರು,ನ27,Tv10 ಕನ್ನಡ
ಎಸ್.ಸಿ/ಎಸ್.ಟಿ. ಸಂಶೋಧನಾ ವಿಧ್ಯಾರ್ಥಿಗಳ ಶಿಷ್ಯವೇತನ ಹೆಚ್ಚಿಸುವಂತೆ ಆಗ್ರಹಿಸಿ ಮೈಸೂರು ವಿವಿ ಕ್ರಾಫರ್ಡ್ ಮುಂಭಾಗ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಯುತ್ತಿದೆ.ಕಳೆದ 6-7 ವರ್ಷಗಳಿಂದ ಶಿಷ್ಯವೇತನ ಹೆಚ್ಚಿಸುವಂತೆ ಸಂಶೋಧನಾ ವಿಧ್ಯಾರ್ಥಿಗಳ ಸಂಘದ ವತಿಯಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ ಈ ಬಗ್ಗೆ ಸ್ಪಂದಿಸಿಲ್ಲ.ಸಂಶೋಧನೆಗೆ ಬೇಕಾದ ಪರಿಕರಗಳು,ಲೇಖನಗಳ ಪ್ರಕಟಣಾ ವೆಚ್ಚ,ಶುಲ್ಕಗಳು ಗಣನೀಯವಾಗಿ ಹೆಚ್ಚಾಗಿದೆ.ಹೀಗಿದ್ದೂ ಶಿಷ್ಯವೇತನ ಹೆಚ್ಚಿಸುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಎಸ್.ಸಿ/ಎಸ್.ಟಿ ಸಂಶೋಧನಾ ವಿಧ್ಯಾರ್ಥಿಗಳು ಅನಿರ್ಧಿಷ್ಠಾವಧಿ ಪ್ರತಿಭಟನೆ ಆರಂಭಿಸಿದ್ದಾರೆ…