ಮದುವೆ ಅಟೆಂಡ್ ಮಾಡಿ ಹಿಂದಿರುಗಿದ ಕುಟುಂಬಕ್ಕೆ ಅಘಾತ…1 ಲಕ್ಷ ನಗದು,5.7 ಲಕ್ಷ ಮೌಲ್ಯದ ಚಿನ್ನಾಭರಣ ಕಳುವು…
- TV10 Kannada Exclusive
- November 28, 2024
- No Comment
- 106
ಮೈಸೂರು,ನ28,Tv10 ಕನ್ನಡ
ಕೇರಳದಲ್ಲಿ ಸಂಭಂಧಿಕರ ಮದುವೆಗೆ ತೆರಳಿ ಹಿಂದಿರುಗಿದ ಕುಟುಂಬಕ್ಕೆ ಕಳ್ಳರು ಅಘಾತ ನೀಡಿದ್ದಾರೆ.ಮನೆಯ ಹಿಂಬದಿ ಬಾಗಿಲು ಮೀಟಿ ಒಂದು ಲಕ್ಷ ನಗದು ಹಾಗೂ 5.77 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಈ ಸಂಭಂದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿರುವ ಇಲಿಯಾಸ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ.ಕೇರಳದಲ್ಲಿ ಸಂಭಂಧಿಕರ ಮದುವೆಗೆ ಇಡೀ ಕುಟುಂಬ ತೆರಳಿತ್ತು.ವಾಪಸ್ ಬಂದಾಗ ಮೊದಲ ಅಂತಸ್ತಿನ ಕೊಠಡಿಯ ವಾಗಿಲು ಮೀಟಿ ಪ್ರವೇಶಿಸಿರುವ ಖದೀಮರು 5.77 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಲಕ್ಷ ಕ್ಯಾಶ್ ದೋಚಿ ಪರಾರಿಯಾಗಿದ್ದಾರೆ.ವಾಹನ ಬಿಡಿಭಾಗಗಳ ವ್ಯಾಪಾರಿಯಾಗಿರುವ ಇಲಿಯಾಸ್ ರವರು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…