ಸದರನ್ ಸ್ಟಾರ್ ಹೋಟೆಲ್ ಮಾಲೀಕರ ಮನೆಯಲ್ಲಿ ಕಳ್ಳರ ಕೈಚಳಕ…ಕದಿಯಲು ಐನಾತಿಗಳು ಮಾಡಿದ ಪ್ಲಾನ್ ಏನು ಗೊತ್ತಾ…?
- TV10 Kannada Exclusive
- November 29, 2024
- No Comment
- 529
ಮೈಸೂರು,ನ29,Tv10 ಕನ್ನಡ
ಮನೆಯಲ್ಲಿರುವ ಗೃಹಪಯೋಗಿ ವಸ್ತುಗಳನ್ನ ಕಣ್ಣಮುಂದೆಯೇ ಚಾಲಾಕಿತನ ಬಳಸಿ ಕದ್ದೊಯ್ದ ಘಟನೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮನೆಯಲ್ಲಿ ವ್ಯಕ್ತಿಯೊಬ್ಬರು ಇದ್ದರೂ ಸಕ್ಕತ್ ಪ್ಲಾನ್ ಉಪಯೋಗಿಸಿ ಪದಾರ್ಥಗಳನ್ನ ಹೊತ್ತು ಸಾಗಿದ್ದಾರೆ.
ಜಯಲಕ್ಷ್ಮಿಪುರಂ 3 ನೇ ಹಂತ,8 ನೇ ಮುಖ್ಯರಸ್ತೆಯಲ್ಲಿ ಸದರನ್ ಸ್ಟಾರ್ ಹೋಟೆಲ್ ಮಾಲೀಕರ ಮನೆ ಇದೆ.ಹೋಟೆಲ್ ಸಿಬ್ಬಂದಿಗಳು ತಂಗಲು ಇಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ.ಸಿಬ್ಬಂದಿಗಳ ಅನುಕೂಲಕ್ಕಾಗಿ ಒಂದು ಟಿವಿ,ಟೀಪಾಯಿ,ಸ್ಟಡಿ ಟೇಬಲ್,ಮಿನಿ ಫ್ರಿಡ್ಜ್ ಇಡಲಾಗಿದೆ.ಮನೆಯಲ್ಲಿ ರೆಸ್ಟೋರೆಂಟ್ ಮ್ಯಾನೇಜರ್ ಬೋಲೇನಾಥ್ ಎಂಬುವರು ಇದ್ದಾಗ ಕೆಲವು ಯುವಕರು ಬಂದು ಹೋಟೆಲ್ ನವರು ಪದಾರ್ಥಗಳನ್ನ ತೆಗೆದುಕೊಂಡು ಬರುವಂತೆ ತಿಳಿಸಿರುವುದಾಗಿ ಹೇಳಿದ್ದಾರೆ.ಜೊತೆಗೆ ಫೋನ್ ಕಾಲ್ ಮಾಡಿ ಹೋಟೆಲ್ ನವರೇ ಮಾತನಾಡಿದಂತೆ ನಟಿಸಿ ಪದಾರ್ಥಗಳನ್ನ ನೀಡುವಂತೆ ವ್ಯಕ್ತಿಯೊಬ್ಬ ತಿಳಿಸಿದ್ದಾನೆ.ಕಿಲಾಡಿಗಳ ಪ್ಲಾನ್ ಅರಿಯದೆ ಬೋಲೇನಾಥ್ ಹೋಟೆಲ್ ನಿಂದಲೇ ಕಾಲ್ ಬಂದಿದೆ ಎಂದು ಅರಿತು ಪದಾರ್ಥಗಳನ್ನ ನೀಡಿದ್ದಾರೆ.ಬೋಲೇನಾಥ್ ರವರ ಕಣ್ಣಮುಂದೆಯೇ ನಯವಂಚಕರು ಐನಾತಿ ಪ್ಲಾನ್ ಮಾಡಿ ಗೃಹಪಯೋಗಿ ವಸ್ತುಗಳನ್ನ ಲಪಟಾಯಿಸಿದ್ದಾರೆ.ಈ ಸಂಭಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..