ಮಾರಕ ರೋಗಕ್ಕೆ ಸಿಲುಕಿ ಹಾಸಿಗೆ ಹಿಡಿದ ಗ್ರಾ.ಪಂ.ಅಧ್ಯಕ್ಷೆ…ಸಹಾಯ ಹಸ್ತಕ್ಕಾಗಿ ಮೊರೆ…6 ತಿಂಗಳಿನಿಂದ ಬದುಕಿಗಾಗಿ ಹೋರಾಟ…
- TV10 Kannada Exclusive
- November 30, 2024
- No Comment
- 82
ನಂಜನಗೂಡು,ನ30,Tv10 ಕನ್ನಡ
ಮಾರಕ ಖಾಯಿಲೆಗೆ ಸಿಲುಕಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ 6 ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ.ಚಿಕಿತ್ಸೆಗಾಗಿ ಲಕ್ಷಾಂತರ ಹಣ ವೆಚ್ಚವಾಗಲಿದ್ದು ಸಹಾಯಹಸ್ತಕ್ಕಾಗಿ ಮೊರೆ ಇಡುತ್ತಿದ್ದಾರೆ.ಹಾಸಿಗೆ ಹಿಡಿದು ಬದುಕಿಗಾಗಿ ಹೋರಾಟ ನಡೆಸುತ್ತಿರುವ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೆರವಿಗೆ ಹೃದಯವಂತ ಉದಾರಿಗಳು ನೆರವಿಗೆ ಬರಬೇಕಿದೆ.
ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹದೇವಮ್ಮ ಹಾಸಿಗೆ ಹಿಡಿದವರು.ಡೋರನಕಟ್ಟೆ ಆದಿವಾಸಿ ಕಾಲೋನಿಯ ನಿವಾಸಿ ಆಗಿರುವ ಹಾಲಿ ಅಧ್ಯಕ್ಷೆ ಮಹದೇವಮ್ಮ ಗೆ ಸುಮಾರು 6 ತಿಂಗಳ ಹಿಂದೆ ಮಾರಕ ಖಾಯಲೆ ಇರುವುದು ಬೆಳಕಿಗೆ ಬಂದಿದೆ.ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗಿಲ್ಲ.ಇದೀಗ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈಗಾಗಲೇ ಲಕ್ಷಾಂತರ ಹಣ ಖರ್ಚು ಮಾಡಿರುವ ಮಹದೇವಮ್ಮ ಮುಂದಿನ ಚಿಕಿತ್ಸೆ ವೆಚ್ಚ ಭರಿಸಲಾಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.ಮಹದೇವಮ್ಮ ರವರ ಚಿಕಿತ್ಸೆಗೆ ಲಕ್ಷಾಂತರ ಹಣದ ಅವಶ್ಯಕತೆ ಇದೆ.ಉದಾರಿಗಳು ಮಹದೇವಮ್ಮ ನೆರವಿಗೆ ಬರಬೇಕಿದೆ…