CBI ಅಧಿಕಾರಿ ಎಂದು ಬೆದರಿಸಿ ನಿವೃತ್ತ ಅಧಿಕಾರಿಯಿಂದ 61 ಲಕ್ಷ ಪೀಕಿದ ಖದೀಮರು…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…
- TV10 Kannada Exclusive
- November 30, 2024
- No Comment
- 23
ಮೈಸೂರು,ನ30,Tv10 ಕನ್ನಡ
ಸಿಬಿಐ ಅಧಿಕಾರಿ ಎಂದು ಸುಳ್ಳು ಹೇಳಿ ನಿವೃತ್ತ ಅಧಿಕಾರಿಯೊಬ್ಬರಿಂದ 61 ಲಕ್ಷ ಲಪಟಾಯಿಸಿದ ಪ್ರಕರಣವೊಂದು ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಯಲಕ್ಷ್ಮಿಪುರಂ ನಿವಾಸಿ ಗೌರಿಶಂಕರ್ ಕೃಪಾನಿಧಿ (86) ಎಂಬುವರೇ ಹಣ ಕಳೆದುಕೊಂಡ ನಿವೃತ್ತ ಅಧಿಕಾರಿ.ನವೆಂಬರ್ 16 ರಂದು ಅನಾಮಧೇಯ ವ್ಯಕ್ತಿ ಕರೆ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ನಂಬಿಸಿ ಬ್ಯಾಂಕ್ ಖಾತೆ ಮಾಹಿತಿ ಪಡೆದುಕೊಂಡಿದ್ದಾನೆ.ನಂತರ ಹಂತ ಹಂತವಾಗಿ 61 ಲಕ್ಷ ಹಣ ಪೀಕಿದ್ದಾನೆ.ಈ ಸಂಭಂಧ ಗೌರಿಶಂಕರ್ ಕೃಪಾನಿಧಿ ರವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…