![ಉದ್ಯೋಗ ಕೊಡಿ…ಉದ್ಯೋಗ ಕೊಡಿ…ಭೂಮಿ ನೀಡಿದ ರೈತರಿಂದ ಕಾರ್ಖಾನೆ ಮುಂಭಾಗ ಪ್ರತಿಭಟನೆ…7 ನೇ ದಿನಕ್ಕೆ ಕಾಲಿಟ್ಟ ಹೋರಾಟ…](https://tv10kannada.com/wp-content/uploads/2024/12/IMG-20241202-WA0035.jpg)
ಉದ್ಯೋಗ ಕೊಡಿ…ಉದ್ಯೋಗ ಕೊಡಿ…ಭೂಮಿ ನೀಡಿದ ರೈತರಿಂದ ಕಾರ್ಖಾನೆ ಮುಂಭಾಗ ಪ್ರತಿಭಟನೆ…7 ನೇ ದಿನಕ್ಕೆ ಕಾಲಿಟ್ಟ ಹೋರಾಟ…
- TV10 Kannada Exclusive
- December 2, 2024
- No Comment
- 114
![](https://tv10kannada.com/wp-content/uploads/2024/12/img-20241202-wa00343480321023263097525-1024x461.jpg)
ಮೈಸೂರು,ಡಿ2,Tv10 ಕನ್ನಡ
ಕೈಗಾರಿಕೆಗಳ ಅಭಿವೃದ್ದಿಗಾಗಿ ವರುಣ ಕ್ಷೇತ್ರದ ಕೆಂಪಿಸಿದ್ದನಹುಂಡಿ ರೈತರು 15 ವರ್ಷಗಳ ಹಿಂದೆ ಭೂಮಿ ನೀಡಿದ್ದರು.ಬದಲಾಗಿ ಉದ್ಯೋಗ ನೀಡುವ ಭರವಸೆ ನೀಡಿದ್ದರು.ವರ್ಷಗಳು ಉರುಳುತ್ತಿದ್ದರೂ ಕಾರ್ಖಾನೆಗಳು ಅಸ್ತಿತ್ವಕ್ಕೆ ಬರುತ್ತಿದೆ ಹೊರತು ಭೂಮಿ ನೀಡಿದ ರೈತ ಕುಟುಂಬಗಳಿಗೆ ಉದ್ಯೋಗ ನೀಡಿಲ್ಲ.ಈ ಬಗ್ಗೆ ಹಲವಾರು ಹೋರಾಟಗಳು ನಡೆದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ.ಈ ಹಿನ್ನಲೆ ಉದ್ಯೋಗ ನೀಡದ ಕಾರ್ಖಾನೆಗಳ ವಿರುದ್ದ ಸಿಡಿದೆದ್ದಿದ್ದಾರೆ.ಅಹೋರಾತ್ರಿ ಮುಷ್ಕರ ಕೈಗೊಂಡಿದ್ದಾರೆ.ಮುಷ್ಕರ 7 ನೇ ದಿನಕ್ಕೆ ಕಾಲಿಟ್ಟಿದೆ.
ಸಿಎಂ ತವರು ಜಿಲ್ಲೆಯ ವರುಣ ಕ್ಷೇತ್ರದ ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಅನ್ಯಾಯವಾಗಿದೆ. ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಯುತ್ತಿದೆ.
ಭೂಮಿಯನ್ನು ಕಳೆದುಕೊಂಡ ರೈತ ಕುಟುಂಬಗಳ ಜೀವನ ದುಸ್ಥರವಾಗಿದೆ. 7 ದಿನಗಳಿಂದ ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಮುಂದೆ ರೈತರು, ರೈತ ಮಹಿಳೆಯರು, ರೈತ ಮಕ್ಕಳು, ವಯಸ್ಸಾದ ವೃದ್ಧರು ತಮ್ಮ ಜಾನುವಾರು, ಕೆಲಸ, ಕೂಲಿಯನ್ನು ಬಿಟ್ಟು ಹಗಲು ರಾತ್ರಿ, ಬಿಸಿಲು, ಮಳೆ, ಕೊರೆಯುವ ಚಳಿಯಲ್ಲಿ ತಮ್ಮ ಕುಟುಂಬಗಳಿಗೆ ಅಹೋರಾತ್ರಿ ಹೋರಾಟ ಮಾಡುತ್ತಿದ್ದಾರೆ.ಜಿಲ್ಲಾ ಆಡಳಿತವಾಗಲಿ, ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯರವರಾಗಲಿ ಇದರ ಬಗ್ಗೆ ಗಮನಹರಿಸಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಬಿಟ್ಟು ನಾವು ಹಿಂದಿರುಗುವುದಿಲ್ಲ ಎಂಬ ದೃಢ ನಿರ್ಧಾರದಿಂದ ರೈತರು ಹೋರಾಟವನ್ನು ಮುಂದುವರಿಸಿದ್ದಾರೆ.
ಹೋರಾಟದ ನೇತೃತ್ವವನ್ನು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ವಹಿಸಿದೆ. ರೈತನಾಯಕರಾದ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಜನಾಂದೋಲನಗಳ ಮಹಾ ಮೈತ್ರಿಯ ರಾಜ್ಯ ನಾಯಕರಾದ ಉಗ್ರನರಸಿಂಹೇಗೌಡರು, ಎಐಕೆಕೆಎಂಎಸ್ ಜಿಲ್ಲಾ ಸಂಚಾಲಕರಾದ ಬಸವರಾಜು ಎಚ್.ಎಂ. ರವರು ಹಾಗೂ ಕೆಂಪಿಸಿದ್ದನಹುಂಡಿಯ ರೈತರಾದ ಉಮೇಶ್, ಮಂಜು, ರವಿಕುಮಾರ್ ಕೆ.ಕೆ, ಚಂದ್ರು, ಹೂವಮ್ಮ, ಜಯಲಕ್ಷ್ಮಿಮ್ಮ, ಮಲ್ಲಿಗಮ್ಮ, ನಾಗರತ್ನಮ್ಮ, ಸೌಭಾಗ್ಯ, ನಾಗಮ್ಮ ಸೇರಿದಂತೆ ಹಲವಾರು ರೈತರು ಭಗವಹಿಸಿದ್ದಾರೆ…