ಹುಣಸೂರು:ಒಂಟಿಯಾಗಿದ್ದ ವೃದ್ದೆ ಬರ್ಬರ ಕೊಲೆ…
- TV10 Kannada Exclusive
- December 3, 2024
- No Comment
- 39
ಹುಣಸೂರು,ಡಿ3,Tv10 ಕನ್ನಡ
ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ದೆಯನ್ನ ಬರ್ಭರವಾಗಿ ಕೊಲೆಗೈದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.
ಶಾಂತಕುಮಾರಿ (70) ಕೊಲೆಯಾದ ದುರ್ದೈವಿ.
ಪುತ್ರ ಮನೆಗೆ ಬಂದಾಗ ತಾಯಿ ರಕ್ತದ ಮಡುವಿನಲ್ಲಿದ್ದ ದೃಶ್ಯ ಕಂಡು ಬಂದಿದೆ.ಕೂಡಲೇ ಬಿಳಿಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಅಡಿಷನಲ್ ಎಸ್ ಪಿ ನಾಗೇಶ್, ಡಿವೈಎಸ್ ಪಿ ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆರಳಚ್ಚು ತಜ್ಞರು, ಶ್ವಾನದಳ
ಜಿಲ್ಲಾ ಸೋಷಿಯಲ್ ಟೀಂ ನಿಂದ ಪರಿಶೀಲನೆ ನಡೆದಿದೆ.ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…