ಜಮೀನು ಖರೀದಿಸಿ ನಿವೇಶನ ಅಭಿವೃದ್ದಿಪಡಿಸಿಕೊಡುವುದಾಗಿ ನಂಬಿಸಿ ಕೊ.ಆಪರೇಟಿವ್ ಸೊಸೈಟಿಗೆ ದ್ರೋಹ…ಮೂವರ ವಿರುದ್ದ FIR ದಾಖಲು…
- TV10 Kannada Exclusive
- December 3, 2024
- No Comment
- 87
ಮೈಸೂರು,ಡಿ3,Tv10 ಕನ್ನಡ
ಸಂಘದ ಸದಸ್ಯರ ಅನುಕೂಲಕ್ಕಾಗಿ ಜಮೀನು ಖರೀದಿಸಿ ವಸತಿ ನಿವೇಶನಗಳನ್ನ ಅಭಿವೃದ್ದಿ ಕೊಡಿಸುವುದಾಗಿ ನಂಬಿಸಿ ಕೋ.ಆಪರೇಟಿವ್ ಸೊಸೈಟಿ ಒಂದಕ್ಕೆ ಕೋಟ್ಯಾಂತರ ರೂ ವಂಚಿಸಿರುವ ಪ್ರಕರಣ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಈ ಸಂಭಂಧ ಸರಸ್ವತಿಪುರಂ ನಲ್ಲಿರುವ ಸ್ಕಿಲ್ ಟೆಕ್ ಇಂಜಿನಿಯರ್ಸ್ ಸಂಸ್ಥೆಯ ಮೂವರು ನಿರ್ದೇಶಕರ ವಿರುದ್ದ ವಂಚನೆಗೆ ಒಳಗಾದ ಶ್ರೀ ರಾಮಕೃಷ್ಣ ಹೌಸ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಮುಖ್ಯಸ್ಥರು ಪ್ರಕರಣ ದಾಖಲಿಸಿದ್ದಾರೆ.
2006 ರಲ್ಲಿ ಶ್ರೀ ರಾಮಕೃಷ್ಣ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿಯವರು ತಮ್ಮ ಸದಸ್ಯರಿಗಾಗಿ ನಿವೇಶನ ನಿರ್ಮಿಸಲು ಸ್ಕಿಲ್ ಟೆಕ್ ಇಂಜಿನಿಯರ್ಸ್ ನ ನಿರ್ದೇಶಕರಾದ ಶಿವಶಂಕರ್,ಅರುಣ್ ಕುಮಾರ್,ವೀರೇಶ್ ರವರ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.ಹಂಚ್ಯಾ ಗ್ರಾಮದ ಸರ್ವೆ ನಂ.45 ರಲ್ಲಿ 30 ಎಕ್ರೆ ಜಮೀನು ನೀಡುವುದಾಗಿ ಅಗ್ರೀಮೆಂಟ್ ಮಾಡಿಕೊಂಡು 181 ನಿವೇಶನಗಳನ್ನ ಅಭಿವೃದ್ದಿ ಮಾಡಿಕೊಂಡುವುದಾಗಿ ಒಪ್ಪಿದ್ದಾರೆ.ಈ ಸಂಭಂಧ ಸ್ಕಿಲ್ ಟೆಕ್ ಇಂಜಿನಿಯರ್ ಸಂಸ್ಥೆಗೆ 14,67,04,434/- ರೂ ಗಳನ್ನ ಪಾವತಿ ಮಾಡಲಾಗಿದೆ.ಒಪ್ಪಂದದಂತೆ 30 ಎಕ್ರೆ ಜಮೀನಿಗೆ ಬದಲಾಗಿ ಕೇವಲ 12 ಎಕ್ರೆ ಜಮೀನು ಖರೀದಿಸಿ 90 ಸೈಟ್ ಗಳನ್ನ ನೀಡಿದ್ದಾರೆ.ಈ ವೇಳೆ ಸದಸ್ಯರಿಂದ ಪ್ರತಿ ಚದರ ವಿಸ್ತೀರ್ಣಕ್ಕೆ ರೂ 95/- ರಂತೆ ಹೆಚ್ಚುವರಿಯಾಗಿ 2,63,47,614/- ರೂ ಪಡೆದಿದ್ದಾರೆ.ಉಳಿದ 90 ನಿವೇಶನಗಳಿಗಾಗಿ ಒತ್ತಡ ಹೇರಿದಾಗ ಸಮಯಾವಕಾಶ ಪಡೆದು ನಂತರ ನಿವೇಶನ ನೀಡುವಲ್ಲಿ ವಿಫಲರಾಗಿದ್ದಾರೆ.ಇದೇ ವೇಳೆ ಕೋ.ಆಪರೇಟಿವ್ ಸೊಸೈಟಿಗೆ ಮರೆಮಾಚಿ ಹಂಚ್ಯಾ ಗ್ರಾಮದ ಸರ್ವೆ ನಂ.126 ರಲ್ಲಿ 6 ಎಕ್ರೆ 28 ಗುಂಟೆ ಜಮೀನು ಖರೀದಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆಂದು ಆರೋಪಿಸಿದ್ದಾರೆ.ಒಪ್ಪಂದದ ಪ್ರಕಾರ 181 ನಿವೇಶನಗಳನ್ನ ನೀಡದೆ ಕೇವಲ 90 ನಿವೇಶನಗಳನ್ನ ನೀಡಿ ಉಳಿದ 90 ನಿವೇಶನಗಳನ್ನ ನೀಡಿಲ್ಲ.ಹಾಗೂ ಸದಸ್ಯರಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಿದ್ದಾರೆ.ಉಳಿಕೆ 90 ನಿವೇಶನಗಳನ್ನ ನೀಡಲು ವಿಫಲವಾಗಿರುವ ಸ್ಕಿಲ್ ಟೆಕ್ ಇಂಜಿನಿಯರ್ಸ್ ಸಂಸ್ಥೆಯ ಮೂವರು ನಿರ್ದೇಶಕರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ…