
ಕೌಟುಂಬಿಕ ಕಲಹ: ಪತ್ನಿಯನ್ನ ಕೊಂದು ಪೊಲೀಸರಿಗೆ ಶರಣಾದ ಪತಿ…
- CrimeTV10 Kannada Exclusive
- December 4, 2024
- No Comment
- 304
ಮೈಸೂರು,ಡಿ4,Tv10 ಕನ್ನಡ
ಕೌಟುಂಬಿಕ ಕಲಹ ಹಿನ್ನಲೆ ಪತ್ನಿಯ ಕತ್ತನ್ನ ಕೊಯ್ದ ಕೊಲೆಗೈದ ಪತಿ ಪೊಲೀಸರಿಗೆ ಶರಣಾದ ಘಟನೆ ಮೈಸೂರಿನ ಲಕ್ಷ್ಮಿಕಾಂತ ನಗರದಲ್ಲಿ ನಡೆದಿದೆ.ಶೃತಿ (28) ಪತಿಯಿಂದ ಕೊಲೆಯಾದ ಪತ್ನಿ.ಮನು(27) ಹತ್ಯೆಗೈದು ಪೊಲೀಸರಿಗೆ ಶರಣಾದ ಪತಿ.
ಬನುಮಯ್ಯ ಕಾಲೇಜಿನಲ್ಲಿ ಬಿಕಾಂ ನಲ್ಲಿದ್ದ ವೇಳೆ ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ.5 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದಾರೆ.ಅಂತರ್ಜಾತಿ ವಿವಾಹವಾಗಿ ಲಕ್ಷ್ಮಿಕಾಂತ ನಗರದಲ್ಲಿ ಮನೆ ಮಾಡಿ ವಾಸವಿದ್ದ ದಂಪತಿ ನಡುವೆ ಕ್ಷುಲ್ಲಕ ಕಾರಣಗಳಿಗೆ ಜಗಳವಾಗಿದೆ.ಇಂದು ಮುಂಜಾನೆ 4 ಗಂಟೆ ವೇಳೆಯಲ್ಲಿ ನಡೆದ ಜಗಳದಲ್ಲಿ ಪತ್ನಿಗೆ ಮನು ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆಗೈದು ನಂತರ ಪೊಲೀಸರಿಗೆ ಶರಣಾಗಿದ್ದಾನೆ.
ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ ಪ್ರಕರಣ ದಾಖಲಾಗಿದೆ…