ಮಹಿಳೆಯರ ಬಗ್ಗೆ ಅಸಭ್ಯ ಚಿತ್ರಗಳನ್ನ ಬಿಡಿಸಿ ಮನೆ ಮುಂದೆ ಇಡುತ್ತಿದ್ದ ಸೈಕೋ…ನ್ಯಾಯ ನೀಡುವ ಗ್ರಾಮದ ಮುಖಂಡನಿಂದಲೇ ಕೃತ್ಯ…ರೆಡ್ ಹ್ಯಾಂಡಾಗಿ ಹಿಡಿದ ಗ್ರಾಮಸ್ಥರು…

ಮಹಿಳೆಯರ ಬಗ್ಗೆ ಅಸಭ್ಯ ಚಿತ್ರಗಳನ್ನ ಬಿಡಿಸಿ ಮನೆ ಮುಂದೆ ಇಡುತ್ತಿದ್ದ ಸೈಕೋ…ನ್ಯಾಯ ನೀಡುವ ಗ್ರಾಮದ ಮುಖಂಡನಿಂದಲೇ ಕೃತ್ಯ…ರೆಡ್ ಹ್ಯಾಂಡಾಗಿ ಹಿಡಿದ ಗ್ರಾಮಸ್ಥರು…

ನಂಜನಗೂಡು,ಡಿ10,Tv10 ಕನ್ನಡ

ಮಹಿಳೆಯರು,ಯುವತಿಯರ ಬಗ್ಗೆ ಅಸಭ್ಯವಾಗಿ ಲೈಂಗಿಕ ಚಿತ್ರಗಳನ್ನ ಬಿಡಿಸಿ ಹೆಸರುಗಳನ್ನ ನಮೂದಿಸಿ ಮನೆಗಳ ಮುಂದೆ ಇಟ್ಟು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಸೈಕೋಪಾತ್ ನ ಗ್ರಾಮಸ್ಥರು ಹೊಂಚು ಹಾಕಿ ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ವಿಲಕ್ಷಣ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಮದ ವರದರಾಜಸ್ವಾಮಿ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.ಗ್ರಾಮದಲ್ಲಿ ಸಮಸ್ಯೆಗಳು ಶುರುವಾದಾಗ ನ್ಯಾಯಕ್ಕಾಗಿ ನಿಲ್ಲುತ್ತಿದ್ದ ಮುಖಂಡನಿಂದಲೇ ಕೃತ್ಯ ನಡೆದಿದೆ.ಹಲವಾರು ದಿನಗಳಿಂದ ಸೈಕೋಪಾತ್ ನ ಹಿಡಿಯಲು ಗ್ರಾಮಸ್ಥರು ಹೊಂಚು ಹಾಕಿದ್ದು ನಿನ್ನೆ ರಾತ್ರಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.ಸಾಕ್ಷಿ ಸಮೇತ ಈತನನ್ನ ಹಿಡಿದ ಗ್ರಾಮಸ್ಥರು ಹುಲ್ಲಹಳ್ಳಿ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ವರದರಾಜಸ್ವಾಮಿ ಬಡಾವಣೆ ನಿವಾಸಿ ಹಾಗೂ ಗ್ರಾಮದ ಮುಖಂಡ ಶಿವಣ್ಣ(54) ಸಿಕ್ಕಿ ಬಿದ್ದ ಸೈಕೋಪಾತ್.ಸುಮಾರು ಮೂರ್ನಾಲ್ಕು ವರ್ಷಗಳಿಂದ ವರದರಾಜಸ್ವಾಮಿ ಬಡಾವಣೆ ಮಹಿಳೆಯರ ಬಗ್ಗೆ ಅಸಭ್ಯವಾಗಿ ಚಿತ್ರಗಳನ್ನ ಬಿಳಿ ಹಾಳೆಯಲ್ಲಿ ಬರೆದು ಹೆಸರುಗಳನ್ನ ಜೊತೆ ಉಲ್ಲೇಖಿಸಿ ಅವರ ಮನೆಗಳ ಮುಂದೆ ಇಡುತ್ತಿದ್ದ.ಇದರಿಂದಾಗಿ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಿದ್ದವು.ಕೆಲವು ಮದುವೆ ಸಂಭಂಧಗಳೂ ಮುರಿದು ಬಿದ್ದಿದ್ದವು.ಮನೆಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದ ಅಸಭ್ಯ ಚಿತ್ರಗಳುಳ್ಳ ಚೀಟಿಗಳು ಗ್ರಾಮವನ್ನೇ ಚಿಂತೆಗೆ ಈಡು ಮಾಡಿತ್ತು.ಸೈಕೋಪಾತ್ ನನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಗ್ರಾಮಸ್ಥರು ಹಲವಾರು ದಿನಗಳಿಂದ ಹೊಂಚು ಹಾಕುತ್ತಿದ್ದರು.ನಿನ್ನೆ ತಡರಾತ್ರಿ ಸೈಕಲ್ ನಲ್ಲಿ ಬಂದ ಶಿವಣ್ಣ ಮನೆ ಮುಂದೆ ಚೀಟಿಯನ್ನ ಇಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.ಬಿಸಿ ಬಿಸಿ ಕಜ್ಜಾಯಗಳನ್ನ ಕೊಟ್ಟ ಗ್ರಾಮಸ್ಥರು ಹುಲ್ಲಹಳ್ಳಿ ಪೊಲೀಸರ ವಶಕ್ಕೆ ನೀಡಿದ್ದಾರೆ.ಶಿವಣ್ಣನ ವಿರುದ್ದ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಿಸಿರುವ ಹುಲ್ಲಹಳ್ಳಿ ಠಾಣೆ ಪೊಲೀಸರು ಕಂಬಿ ಎಣಿಸಲು ಕಳಿಸಿದ್ದಾರೆ…

Spread the love

Related post

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ… ಮೈಸೂರು,ಅ16,Tv10 ಕನ್ನಡ ಮಾಧ್ಯಮದ ಗೆಳೆಯರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ.ಚಾಮುಂಡಿ ಬೆಟ್ಟಕ್ಕೆ ಭೇಟಿ‌ ನೀಡಿದ ವೇಳೆತಾವೇ ಮೊಬೈಲ್ ಪಡೆದು ಸೆಲ್ಫಿ…
ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ 7 ಮಂದಿ ವಿರುದ್ದ FIR…

ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ…

ಮೈಸೂರು,ಅ16,Tv10 ಕನ್ನಡ ಪಿಯು ಕಾಲೇಜಿಗೆ ಉಪ ಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಗೆ ಟ್ರಸ್ಟಿಯಾಗಿ ನೇಮಕ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಿಎಆರ್ ಮುಖ್ಯಪೇದೆ ಹಾಗೂ ಪತ್ನಿ 7.45 ಲಕ್ಷ ವಂಚಿಸಿದ…
ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…

Leave a Reply

Your email address will not be published. Required fields are marked *