ವರ್ಕ್ ಫ್ರಂ ಹೋಮ್ ನಲ್ಲಿ ಹೆಚ್ಚಿನ ಆದಾಯ ಆಮಿಷ…19.89 ಲಕ್ಷ ಕಳೆದುಕೊಂಡ ಮಹಿಳೆ
- TV10 Kannada Exclusive
- December 12, 2024
- No Comment
- 84
ಮೈಸೂರು,ಡಿ12,Tv10 ಕನ್ನಡ
ವರ್ಕ್ ಫ್ರಂ ಹೋಮ್ ನಿಂದ ಹೆಚ್ಚಿನ ಆದಾಯ ಗಳಿಸಬಹುದೆಂಬ ಆಮಿಷವೊಡ್ಡಿದ ನಯವಂಚಕರು ಮೈಸೂರಿನ ಮಹಿಳೆಯೊಬ್ಬರಿಗೆ 19.89 ಲಕ್ಷಕ್ಕೆ ಪಂಗನಾಮ ಹಾಕಿದ್ದಾರೆ.ರಾಜೀವ್ ನಗರದ ನಿವಾಸಿ ತಹಸೀನಾ ರಾವ್ ತರ್ ಹಣ ಕಳೆದುಕೊಂಡ ಮಹಿಳೆ.ಟೆಲಿಗ್ರಾಂ ಆಪ್ ಮೂಲಕ ವಂಚಕರು ತಹಸೀನಾ ರಾವ್ ತರ್ ಗೆ ವರ್ಕ್ ಫ್ರಂ ಹೋಮ್ ಮೂಲಕ ಹೆಚ್ಚಿನ ಆದಾಯ ಗಳಿಸಬಹುದೆಂಬ ಸಂದೇಶ ಕಳಿಸಿದ್ದಾರೆ.ಇದನ್ನ ನಂಬಿದ ತಹಸೀನಾ ರಾವ್ ತರ್ ಟೆಲಿಗ್ರಾಂ ಗ್ರೂಪ್ ಗೆ ಸೇರಿಕೊಂಡಿದ್ದಾರೆ.ಪ್ರತಿದಿನ 2 ರಿಂದ 4 ಸಾವಿರ ಗಳಿಸಬಹುದೆಂದು ನಂಬಿಸಿ ಹಣ ಹೂಡುವಂತೆ ಯಾಮಾರಿಸಿದ್ದಾರೆ.ವಂಚಕರ ಮಾತನ್ನ ನಂಬಿದ ತಹಸೀನಾ ರಾವ್ ತರ್ ಹಂತ ಹಂತವಾಗಿ ಒಟ್ಟು 19,89,723/ರೂ ಗಳನ್ನ ಪಾವತಿಸಿದ್ದಾರೆ.ಕೊನೆಗೆ ಹಣವೂ ಇಲ್ಲ ಲಾಭವೂ ಇಲ್ಲದಂತಾಗಿ ವಂಚನೆಗೆ ಒಳಗಾಗಿದ್ದಾರೆ.ಈ ಕುರಿತಂತೆ ತಹಸೀನಾ ರಾವ್ ತರ್ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…