
ಕೊಟ್ಟಿದ್ದು 4 ಲಕ್ಷ…9 ತಿಂಗಳಲ್ಲಿ ಬಡ್ಡಿ ಸಮೇತ ಪೀಕಿದ್ದು10 ಲಕ್ಷ…ಸಾಲವೇ ತೀರಿಲ್ಲವಂತೆ…ಮೈಸೂರಿನಲ್ಲೊಬ್ಬಳು ಬಡ್ಡಿ ಬಂಗಾರಮ್ಮ…
- TV10 Kannada Exclusive
- December 12, 2024
- No Comment
- 838
ಮೈಸೂರು,ಡಿ12,Tv10 ಕನ್ನಡ
ಸಹಾಯ ಮಾಡುವ ನೆಪದಲ್ಲಿ ಮಹಿಳಾ ಟೈಲರ್ ಒಬ್ಬರಿಗೆ ಹಂತಹಂತವಾಗಿ 4 ಲಕ್ಷ ಸಾಲ ನೀಡಿ ಕೇವಲ 9 ತಿಂಗಳಿಗೆ ಬಡ್ಡಿ,ಚಕ್ರಬಡ್ಡಿ ಸೇರಿಸಿ 10.90 ಲಕ್ಷ ಪೀಕಿದ್ದಲ್ಲದೆ ಮತ್ತೆ ಲಕ್ಷಾಂತರ ಹಣ ಕೊಡಬೇಕೆಂದು ಇಬ್ಬರು ಮಹಿಳೆಯರು ಟಾರ್ಚರ್ ನೀಡುತ್ತಿರುವ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಹೂಟಗಳ್ಳಿ ನಿವಾಸಿ ಪವಿತ್ರಾ ಎಂಬಾಕೆಗೆ ಅನುಷಾ ಹಾಗೂ ರೇಖಾ ಎಂಬುವರು ಹಣಕ್ಕಾಗಿ ಟಾರ್ಚರ್ ನೀಡುತ್ತಿದ್ದಾರೆ.ಬಡ್ಡಿ,ಚಕ್ರಬಡ್ಡಿ ವಸೂಲಿ ಮಾಡಿ ಮತ್ತಷ್ಟು ಹಣಕ್ಕೆ ಒತ್ತಡ ಹೇರುತ್ತಿರುವ ಆಧುನಿಕ ಬಡ್ಡಿಬಂಗಾರಮ್ಮರ ವಿರುದ್ದ ಪ್ರಕರಣ ದಾಖಲಾಗಿದೆ.
ಹೂಟಗಳ್ಳಿಯಲ್ಲಿ ಜೀವನೋಪಾಯಕ್ಕಾಗಿ ಪವಿತ್ರಾ ಟೈಲರ್ ಕೆಲಸ ಮಾಡಿಕೊಂಡಿದ್ದಾರೆ.ವೃತ್ತಿಗೆ ಸಹಾಯ ಮಾಡುವುದಾಗಿ ನಂಬಿಸಿದ ಅನುಷಾ ಮತ್ತು ರೇಖಾ ಬಡ್ಡಿಗೆ ಸಾಲ ನೀಡಿದ್ದಾರೆ.15 ದಿನಕ್ಕೆ 25 % ಬಡ್ಡಿ ವಿಧಿಸಿದ್ದಾರೆ.ಅಮಾಯಕಿ ಪವಿತ್ರಾ ಕೇಳಿದಷ್ಟು ಹಣ ಕೊಡುತ್ತಾ ಬಂದಿದ್ದಾರೆ.2022 ರಿಂದ ಮಾರ್ಚ್ 24 ರವರೆಗೆ 4.20 ಲಕ್ಷ ಹಣ ಸಾಲವಾಗಿ ಹಂತಹಂತವಾಗಿ ಕೊಟ್ಟಿದ್ದಾರೆ.ಬಡ್ಡಿ ಚಕ್ರ ಬಡ್ಡಿ ಸೇರಿಸಿ ಈ ವರೆಗೆ ಪವಿತ್ರಾ 10.96 ಲಕ್ಷ ಪಾವತಿಸಿದ್ದಾರೆ.ಹೀಗಿದ್ದರೂ ಸಾಲ ತೀರಿಲ್ಲವೆಂದು ಪವಿತ್ರಾಗೆ ಟಾರ್ಚರ್ ನೀಡುತ್ತಿದ್ದಾರೆ.ಅನುಷಾ ಹಾಗೂ ರೇಖಾ ಜೊತೆಗೆ ನಂದೀಷ್ ಎಂಬಾತ ಸೇರಿಕೊಂಡು ಹಣಕ್ಕಾಗಿ ಪೀಡಿಸಿದ್ದಾರೆ.ಅಕ್ಟೋಬರ್ ತಿಂಗಳಿನಲ್ಲೂ ಸಹ ಸಾವಿರಾರು ರೂಗಳನ್ನ ಪಾವತಿಸಿರುವ ಪವಿತ್ರಾಗೆ ಬಡ್ಡಿ ಬಂಗಾರಮ್ಮರ ಟಾರ್ಚರ್ ಹೆಚ್ಚಾಗಿದೆ.ಹಣ ಹಿಂದಿರುಗಿಸದಿದ್ದಲ್ಲಿ ಮಾನ ಮರ್ಯಾದೆ ತೆಗೆಯುವುದಾಗಿ ಬೆದರಿಸುತ್ತಿದ್ದಾರೆ.ಅನುಷಾ,ರೇಖಾ ಹಾಗೂ ನಂದೀಶ್ ರವರ ಕಿರುಕುಳಕ್ಕೆ ಬೇಸತ್ತಿರುವ ಪವಿತ್ರಾ ಇದೀಗ ವಿಜಯನಗರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ…