ಚಿರತೆ ದಾಳಿ…10 ಮೇಕೆಗಳು ಬಲಿ…ಗ್ರಾಮಸ್ಥರಲ್ಲಿ ಆತಂಕ…
- TV10 Kannada Exclusive
- December 17, 2024
- No Comment
- 6
ಮೈಸೂರು,ಡಿ17,Tv10 ಕನ್ನಡ
ಚಿರತೆ ದಾಳಿಗೆ 10 ಮೇಕೆಗಳು ಬಲಿಯಾದ ಘಟನೆ
ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಧನಗಳ್ಳಿಯಲ್ಲಿ ನಡೆದಿದೆ.
ಧನಗಳ್ಳಿ ಗ್ರಾಮದ ರೈತ ಬಸವರಾಜು ಎಂಬುವರಿಗೆ ಸೇರಿದ ಮೇಕೆಗಳು ಬಲಿಯಾಗಿವೆ.
ಮೇಕೆ ಸಾಕಾಣಿಕೆಯಿಂದ ಜೀವನ ಸಾಗಿಸುತ್ತಿದ್ದ ರೈತ ಬಸವರಾಜು ಕಂಗಾಲಾಗಿದ್ದಾರೆ.ಚಿರತೆ ದಾಳಿಯಿಂದಾಗಿ ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದೆ.
ಎಂದಿನಂತೆ ಗ್ರಾಮದ ಸಮೀಪದ ಕೆಎಚ್‌ಬಿ ಕಾಲೋನಿ ಬಳಿ ಮೇಕೆಗಳನ್ನು ಮೇಯಲು ಬಿಟ್ಟಿದ್ದ ಬಸವರಾಜು
ಸಂಜೆ ಮನೆಗೆ ಹೊಡೆದುಕೊಂಡು ಹೋಗಲು ಸ್ಥಳಕ್ಕೆ ಬಂದಾಗ ಏಳು ಮೇಕೆಗಳು ರಕ್ತಸಿಕ್ತವಾಗಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಉಳಿದ ಮೂರು ಮೇಕೆಗಳನ್ನ ಚಿರತೆ ಹೊತ್ತೊಯ್ದಿದೆ.
ಚಿರತೆ ದಾಳಿ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ರೈತ ಬಸವರಾಜುಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಸಂಕಷ್ಟಕ್ಕೆ ಸಿಲುಕಿರುವ ಬಸವರಾಜು ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ…