ರಾಜಕೀಯವಾಗಿ ಬೆಳೆಯುತ್ತಿರುವುದಕ್ಕೆ ಅಸೂಯೆ…ಗುಂಪು ಕಟ್ಟಿಕೊಂಡು ದಂಪತಿ ಮೇಲೆ ಹಲ್ಲೆ…ಮಹಿಳೆ ಸೇರಿದಂತೆ 6 ಮಂದಿ ವಿರುದ್ದ FIR ದಾಖಲು…
- TV10 Kannada Exclusive
- December 17, 2024
- No Comment
- 74
ಮೈಸೂರು,ಡಿ17,Tv10 ಕನ್ನಡ
ರಾಜಕೀಯವಾಗಿ ಬೆಳೆಯುತ್ತಿರುವುದನ್ನ ಸಹಿಸದ ಮಹಿಳೆಯೊಬ್ಬಳು ಗುಂಪು ಕಟ್ಟಿಕೊಂಡು ಬಂದು ದಂಪತಿ ಮೇಲೆ ಗೂಂಡಾವರ್ತನೆ ನಡೆಸಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ ಘಟನೆ ಮೈಸೂರಿನ ವಿವೇಕಾನಂದ ನಗರದಲ್ಲಿ ನಡೆದಿದೆ.ಘಟನೆಗೆ ಸಂಭಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ 6 ಮಂದಿ ವಿರುದ್ದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನಪಟ್ಟಣ ನಗರದ ಪವಿತ್ರಾ ಪ್ರಭಾಕರ್ ರೆಡ್ಡಿ ಹಾಗೂ ಇವರ ಸಹಚರರಾದ ರಂಗಪ್ಪ,ಕೆಂಡಗಣ್ಣ,ಅಭಿ,ಶ್ರೀನಿವಾಸ,ಶಿವು ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.ವಿವೇಕಾನಂದ ನಗರದ ನಾಗರತ್ನ ಹಾಗೂ ಇವರ ಪತಿ ಮೊಗಣ್ಣಾಚಾರ್ ಎಂಬುವರೇ ಹಲ್ಲೆಗೆ ಒಳಗಾದ ದಂಪತಿ.
ಮೊಗಣ್ಣಾಚಾರ್ ಹಾಗೂ ಪತ್ನಿ ನಾಗರತ್ನ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಸಮಾಜದಲ್ಲಿ ನಡೆಯುವ ಕೆಲವು ಆಗುಹೋಗುಗಳ ಬಗ್ಗೆ ಮೊಗಣ್ಣಾಚಾರ್ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಾರೆ.ಈ ಬಗ್ಗೆ ಸಾಕಷ್ಟು ಚರ್ಚೆಗಳೂ ಸಹ ನಡೆದಿದೆ.ಮೊಗಣ್ಣಾಚಾರ್ ಏಳಿಗೆಯನ್ನ ಸಹಿಸದ ಪವಿತ್ರಾ ಪ್ರಭಾಕರ್ ರೆಡ್ಡಿ ಏಕಾ ಏಕಿ ನಾಗರತ್ನ ಒಬ್ಬರೇ ಇದ್ದ ಸಮಯದಲ್ಲಿ ತನ್ನ ಪಟಾಲಂ ನ ಕರೆತಂದು ಗುಂಡಾವರ್ತನೆ ನಡೆಸಿ ಪೆಟ್ರೋಲ್ ಹಾಕಿ ಮುಗಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಹಲ್ಲೆಗೆ ಒಳಗಾದ ನಾಗರತ್ನ ರವರು ಪವಿತ್ರಾ ರೆಡ್ಡಿ ಸೇರಿದಂತೆ 6 ಮಂದಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…