ಕೇಂದ್ರ ಕಾರಾಗೃಹ ಆವರಣದಲ್ಲಿ ನಿಷೇಧಿತ ವಸ್ತುಗಳು ಪತ್ತೆ…ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…
- TV10 Kannada Exclusive
- December 18, 2024
- No Comment
- 51
ಮೈಸೂರು,ಡಿ18,Tv10 ಕನ್ನಡ
ಮೈಸೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ನಿಷೇಧತ ವಸ್ತುಗಳು ಪತ್ತೆಯಾಗಿದೆ.ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕಪ್ಪು ಬಣ್ಣದ ಬಟ್ಟೆಯಿಂದ ಸುತ್ತಿದ್ದ ಪ್ಯಾಕೆಟ್ ಕಂಡು ಬಂದಿದೆ.ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿದಾಗ ಪ್ಯಾಕೆಟ್ ನಲ್ಲಿ ಒಂದು ಮೊಬೈಲ್,ಒಂದು ಬ್ಯಾಟರಿ,ಗಾಂಜಾ ಕಂಡು ಬಂದಿದೆ.ಸ್ಮಶಾನಕ್ಕೆ ಹೊಂದಿಕೊಂಡಂತೆ ಇರುವ ಕಾರಾಗೃಹದ ಗೋಡೆ ಒಳಗೆ ವಸ್ತುಗಳು ಪತ್ತೆಯಾಗಿದೆ.ಹೊರಗಿನಿಂದ ಅನಾಮಧೇಯ ವ್ಯಕ್ತಿಗಳು ಕಾರಾಗೃಹದ ಒಳಗೆ ಎಸೆದಿರಬಹುದೆಂದು ಶಂಕಿಸಲಾಗಿದೆ.ಈ ಸಂಭಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…