ಮಲಿನವಾಗುತ್ತಿರುವ ಹುಲ್ಲಹಳ್ಳಿ ನಾಲೆ ನೀರು…ಕಾವೇರಿ ನೀರಾವರಿ ನಿಗಮದಿಂದ ದೇಬೂರು ಗ್ರಾ.ಪಂ. ಪಿಡಿಓ ಗೆ ಪತ್ರ…
- TV10 Kannada Exclusive
- December 18, 2024
- No Comment
- 9
ನಂಜನಗೂಡು,ಡಿ18,Tv10 ಕನ್ನಡ
ನಂಜನಗೂಡು ತಾಲೂಕು ದೇಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹುಲ್ಲಹಳ್ಳಿ ನಾಲೆಯ ಕೆಕವು ಭಾಗಗಳಲ್ಲಿ ನಾಲೆ ನೀರು ಮಲಿನವಾಗುತ್ತಿದೆ.ಕೆಲವು ಹಳ್ಳಿಗಳಿಂದ ಬರುತ್ತಿರುವ ಚರಂಡಿ ನೀರು ನಾಲೆಗೆ ಸೇರುತ್ತಿರುವುದರಿಂದ ಮಲಿನವಾಗುತ್ತಿದೆ.ಅಲ್ಲದೆ ಸರ್ವಿಸ್ ರಸ್ತೆಗಳ ಇಕ್ಕೆಲಗಳಲ್ಲಿ ತ್ಯಾಜ್ಯಗಳನ್ನ ಸುರಿಯಲಾಗುತ್ತಿದೆ.ಹೀಗಾಗಿ ಪರಿಸರ,ನೀರು, ಅಂತರ್ಜಲ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.ಹೀಗಾಗಿ ಕೂಡಲೇ ಸ್ವಚ್ಛತೆಗೆ ಆಧ್ಯತೆ ನೀಡುವಂತೆ ಪಿಡಿಓ ಗೆ ಕಾವೇರಿ ನೀರಾವರಿ ನಿಗಮದಿಂದ ಪತ್ರ ರವಾನೆಯಾಗಿದೆ.ಕಾವೇರಿ ನೀರಾವರಿ ಅಧಿನಿಯಮ 1965 ರ ಅನ್ವಯದಂತೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ನಿಯಮಗಳನ್ನ ಉಲ್ಲಂಘಿಸಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಹಾಗೊಂದು ವೇಳೆ ಮಲಿನವಾಗುತ್ತಿರುವ ನಾಲೆ ನೀರನ್ನ ರಕ್ಷಿಸದಿದ್ದಲ್ಲಿ ಮುಂದಿನ ಆಗು ಹೋಗುಗಳಿಗೆ ನೀವೇ ಹೊಣೆಯಾಗುತ್ತೀರಿ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.ಆಗಸ್ಟ್ ತಿಂಗಳಲ್ಲೇ ಪತ್ರ ರವಾನೆ ಆಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ರಸ್ತೆಯ ಪಕ್ಕದಲ್ಲಿ ತ್ಯಾಜ್ಯಗಳ ರಾಶಿ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಬದ್ದತೆಗೆ ಅಣುಕಿಸುವಂತೆ ಕಾಣುತ್ತಿದೆ.ಇನ್ನಾದರೂ ನಾಲೆಗಳ ರಕ್ಷಣೆಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಆಧ್ಯತೆ ನೀಡುವರೇ…?