
ಲಾಲ್ ಬಾಗ್ ತೋಟದ ಸುತ್ತ ತಂತಿ ಬೇಲಿ ನಿರ್ಮಿಸಿ…ಸಿಎಂ ಗೆ ನಟ,ನಿರ್ದೇಶಕ ಅನಿರುದ್ದ ಜತಕರ ಮನವಿ…
- TV10 Kannada Exclusive
- December 25, 2024
- No Comment
- 115

ಬೆಂಗಳೂರು,ಡಿ25,Tv10 ಕನ್ನಡ
ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಲಾಲ್ ಬಾಗ್ ತೋಟದ ಸುತ್ತ ನಿರ್ಮಿಸಿರುವ ಗೋಡೆಗಳ ಬದಲಿಗೆ ತಂತಿ ಬೇಲಿ ನಿರ್ಮಿಸುವಂತೆ ಸಿಎಂ ಸಿದ್ದರಾಮಯ್ಯ ರವರಿಗೆ ನಟ,ನಿರ್ದೇಶಕ ಅನಿರುದ್ದ ಜತಕರ ಪತ್ರ ನೀಡಿ ಮನವಿ ಮಾಡಿದ್ದಾರೆ.
ಸಿಲಿಕಾನ್ ಸಿಟಿಯ ಲಾಲ್ ಬಾಗ್ ಉದ್ಯಾನವನ,ಪರಿಸರ ಪ್ರೇಮಿಗಳಿಗೆ,ಪ್ರಕೃತಿ ಸೌಂದರ್ಯ ಸವಿಯುವ ಜನರಿಗೆ ಆಕರ್ಷಕ ಕೇಂದ್ರ ಬಿಂದು.ಪ್ರಸ್ತುತ ಲಾಲ್ ಬಾಗ್ ಸುತ್ತಲೂ ನಿರ್ಮಿಸಿರುವ ಗೋಡೆಗಳು ಹಾಗೂ ಅದರ ಮೇಲೆ ಮೂಡಿಸಲಾದ ಅಂದವಾದ ಬಣ್ಣ ಬಣ್ಣದ ಚಿತ್ರಗಳು ಸೊಬಗನ್ನ ಹೆಚ್ಚಿಸಿದೆ.ಆದ್ರೆ ಹೊರಗಿನಿಂದ ಲಾಲ್ ಬಾಗ್ ನ ಅಂದವನ್ನ ವೀಕ್ಷಿಸಲು ಗೋಡಗಳಿಂದಾಗಿ ಅವಕಾಶಚಿ ಇಲ್ಲದಂತಾಗಿದೆ.ಹೀಗಾಗಿ ಕಬ್ಬನ್ ಪಾರ್ಕ್ ಮಾದರಿ ಲಾಲ್ ಬಾಗ್ ಗೂ ಸಹ ತಂತಿ ಬೇಲಿ ನಿರ್ಮಿಸಿ ಹಸಿರು ಹೊದ್ದು ಕಣ್ಣಿಗೆ ಮುದ ನೀಡುವ ಪಾರ್ಕ್ ನ ಅಂದವನ್ನ ಸವಿಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ…