
ಭೋಗ್ಯಕ್ಕೆ ಹೋದ ಕುಟುಂಬದ ಪಜೀತಿ…ಹಣವೂ ಇಲ್ಲ…ಮನೆಯೂ ಇಲ್ಲ…ಅತಂತ್ರಕ್ಕೆ ಸಿಲುಕಿದ ಕುಟುಂಬ…
- TV10 Kannada Exclusive
- December 28, 2024
- No Comment
- 238
ಮೈಸೂರು,ಡಿ28,Tv10 ಕನ್ನಡ
ಭೋಗ್ಯಕ್ಕಾಗಿ ಕರಾರು ಮಾಡಿಕೊಂಡ ಕುಟುಂಬವೊಂದು ಮಾಲೀಕನ ವಂಚನೆಗೆ ಸಿಲುಕಿ ಪಜೀತಿ ಅನುಭವಿಸುತ್ತಿರುವ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಭೋಗ್ಯಕ್ಕಾಗಿ ನೀಡಿದ ಹಣವೂ ಇಲ್ಲ…ವಾಸಕ್ಕೆ ಮನೆಯೂ ಇಲ್ಲದಂತಾಗಿ ಕುಟುಂಬ ಅತಂತ್ರಕ್ಕೆ ಸಿಲುಕಿದೆ.ಇದೀಗ ಕುಟುಂಬ ನ್ಯಾಯಕ್ಕಾಗಿ ನ್ಯಾಯಾಲಯದ ಮೂಲಕ ಮಂಡಿ ಪೊಲೀಸ್ ಠಾಣೆಯಲ್ಲಿ ಮಾಲೀಕನ ವಿರುದ್ದ ವಂಚನೆ ಪ್ರಕರಣ ದಾಖಲಿಸಿದೆ.
ಮಹಮದ್ ಷರೀಪ್ ಎಂಬುವರು ಮಂಡಿಮೊಹಲ್ಲಾದ ಸಾಜದ್ ಆಲಿ ರೋಡ್ ನ ಮನೆ ನಂ 3001 new no M-17/3004 m-12 ಅನ್ನು ಮಾಲೀಕರಾದ ತಪನ್ ಅಡಾಕ್ ಎಂಬುವರಿಂದ 2021 ರಂದು 3 ವರ್ಷಗಳ ಅವಧಿಗಾಗಿ 8 ಲಕ್ಷ ಹಣ ಕೊಟ್ಟು ಭೋಗ್ಯ ಮಾಡಿಸಿಕೊಂಡು ಅಗ್ರೀಮೆಂಟ್ ಮಾಡಿಸಿಕೊಂಡಿದ್ದಾರೆ.10-01-2024 ಕ್ಕೆ ಕರಾರು ಅವಧಿ ಪೂರ್ಣಗೊಂಡಿದೆ.8 ಲಕ್ಷ ಹಣ ಕೇಳಲು ಹೋದಾಗ ಮಾಲೀಕ ತಪನ್ ಅಡಾಕ್ ಕುಟುಂಬ ಸಮೇತ ಪರಾರಿಯಾಗಿದ್ದಾನೆ.ಅಗ್ರೀಮೆಂಟ್ ಗೆ ಗ್ಯಾರೆಂಟಿ ಹಾಕಿದ್ದ ತಪನ್ ಅಡಾಕ್ ಸ್ನೇಹಿತ ವಿಜಯ್ ಕುಮಾರ್ ರನ್ನ ವಿಚಾರಿಸಿದಾಗ 8 ಲಕ್ಷ ತಾವೇ ಕೊಡುವುದಾಗಿ ಒಪ್ಪಿಸಿದ್ದಾರೆ.ಆದರೆ ಹಣ ನೀಡದೆ ವಿಜಯ್ ಕುಮಾರ್ ಸತಾಯಿಸುತ್ತಾ ಬಂದಿದ್ದಾರೆ.ಈ ಮಧ್ಯೆ ತಪನ್ ಅಡಾಕ್ ಸದರಿ ಮನೆ ಮೇಲೆ ಬ್ಯಾಂಕ್ ಆಫ್ ಬರೋಡಾ ದಲ್ಲಿ 36 ಲಕ್ಷ ಸಾಲ ಪಡೆದಿರುವುದಾಗಿ ತಿಳಿದುಬಂದಿದೆ.ಬ್ಯಾಂಕ್ ನವರು ಮಹಮದ್ ಷರೀಫ್ ರವರನ್ನ ಖಾಲಿ ಮಾಡಿಸುಮನೆ ಸೀಜ್ ಮಾಡಿದ್ದಾರೆ. ಈ ಬಗ್ಗೆ ವಿಜಯ್ ಕುಮಾರ್ ಗೆ ಕೇಳಿದಾಗ ಹಣ ಕೊಡುವುದಾಗಿ ತಿಳಿಸಿದ್ದಾರೆ ಹೊರತು ಪಾವತಿಸಿಲ್ಲ.ನಂತರದ ದಿನಗಳಲ್ಲಿ ಹಣ ಕೇಳಿದ್ರೆ ಗತಿ ಕಾಣಿಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ.ಭೋಗ್ಯಕ್ಕೆ ಕೊಟ್ಟ 8 ಲಕ್ಷವೂ ಇಲ್ಲ,ವಾಸ ಮಾಡಲು ಮನೆಯೂ ಇಲ್ಲದಂತಾಗ ಮಹಮದ್ ಷರೀಫ್ ರವರ ಕುಟುಂಬ ಅತಂತ್ರಕ್ಕೆ ಸಿಲುಕಿದೆ.ಸಧ್ಯ ನ್ಯಾಯಾಲಯದ ಮೊರೆ ಹೋದ ಮಹಮದ್ ಷರೀಫ್ ರವರು ಆದೇಶ ಮಾಡಿಸಿಕೊಂಡು ತಪನ್ ಅಡಾಕ್ ಹಾಗೂ ವಿಜಯ್ ಕುಮಾರ್ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…