ಮತ್ತೊಬ್ಬ ಖೈದಿ ಸಾವು…ಮೃತರ ಸಂಖ್ಯೆ ಎರಡಕ್ಕೆ ಏರಿಕೆ…ಮತ್ತೋರ್ವನ ಸ್ಥಿತಿ ಗಂಭೀರ…
- TV10 Kannada Exclusive
- January 8, 2025
- No Comment
- 349
ಮೈಸೂರು,ಜ8,Tv10 ಕನ್ನಡ
ಬೇಕರಿ ಎಸೆನ್ಸ್ ಸೇವಿಸಿ ಆಸ್ಪತ್ರೆ ಸೇರಿದ್ದ ಮೂವರು ಖೈದಿಗಳ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.ನಿನ್ನೆ ಓರ್ವ ಸಾವನ್ನಪ್ಪಿದ್ದು ಇಂದು ಮುಂಜಾನೆ ಮತ್ತೋರ್ವ ಖೈದಿ ಸಾವನ್ನಪ್ಪಿದ್ದಾನೆ.ಇನ್ನೊಬ್ಬ ಖೈದಿಯ ಸ್ಥಿತಿ ಸಹ ಗಂಭೀರ ಎಂದು ಹೇಳಲಾಗಿದೆ.
ಚಾಮರಾಜನಗರದ ನಾಗರಾಜು ಮೃತ ಖೈದಿ.
ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಕುಡಿದು ಅಸ್ವಸ್ಥರಾಗಿದ್ದ ಮೂವರು ಕೈದಿಗಳನ್ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ
ಮೈಸೂರಿನ ಸಾತಗಳ್ಳಿಯ ಮಾದೇಶ್ ಮೃತಪಟ್ಟಿದ್ದ.
ರಮೇಶ್ ಹಾಗೂ ನಾಗರಾಜ್ ಸ್ಥಿತಿ ಗಂಭೀರವಾಗಿತ್ತು.
ಕಿಕ್‌ಗಾಗಿ ಎಸೆನ್ಸ್ ಕುಡಿದಿದ್ದ ಮೂವರು.
ಹೊಸವರ್ಷದ ಕೇಕ್ ತಯಾರಿಸಲು ತರಿಸಲಾಗಿದ್ದ ಎಸೆನ್ಸ್.
ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು.ಡಿ 28ರಂದು ಎಸೆನ್ಸ್ ಕುಡಿದು ಯಾರಿಗೂ ಹೇಳದೆ ಸುಮ್ಮನಾಗಿದ್ದರು.
ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಜೈಲಿನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಅಲ್ಲಿಯೂ ವಿಷಯ ಮುಚ್ಚಿಟ್ಟಿದ್ದರು.
ವೈದ್ಯರು ಈ ಬಗ್ಗೆ ಪ್ರಶ್ನಿಸಿದಾಗ ಸತ್ಯ ಹೇಳಿದರೆಂದು ಹೇಳಲಾಗಿದೆ.
ಅದಗಲೇ ಸಾಕಷ್ಟು ವಿಳಂಬವಾದ ಹಿನ್ನೆಲೆ
ಚಿಕಿತ್ಸೆ ಫಲಕಾರಿಯಾಗದೆ ಮಾದೇಶ ಹಾಗೂ ನಾಗರಾಜು ಸಾವನ್ನಪ್ಪಿದ್ದು
ಉಳಿದ ಮತ್ತೊಬ್ಬ ರಮೇಶ್ ಪರಿಸ್ಥಿತಿ ಸಹಾ ಗಂಭೀರವಾಗಿದೆ.ಈ ಕುರಿತಂತೆ ಹಿರಿ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ