ಸಂಚಾರಿ ನಿಯಮ ಉಲ್ಲಂಘನೆ…ದಂಡ ತಪ್ಪಿಸಿಕೊಳ್ಳಲು ಐನಾತಿ ಐಡಿಯಾ…ನೊಂದಣಿ ಸಂಖ್ಯೆಗೆ ಸ್ಟಿಕ್ಕರ್ ಅಂಟಿಸಿದ ಭೂಪ…

ಸಂಚಾರಿ ನಿಯಮ ಉಲ್ಲಂಘನೆ…ದಂಡ ತಪ್ಪಿಸಿಕೊಳ್ಳಲು ಐನಾತಿ ಐಡಿಯಾ…ನೊಂದಣಿ ಸಂಖ್ಯೆಗೆ ಸ್ಟಿಕ್ಕರ್ ಅಂಟಿಸಿದ ಭೂಪ…

ಮೈಸೂರು,ಜ7,Tv10 ಕನ್ನಡ

ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದಾಗ ದಂಡ ತಪ್ಪಿಸಿಕೊಳ್ಳಲು ಐನಾತಿ ಐಡಿಯಾ ಹಾಕಿದ ಯುವಕನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.ಬೈಕ್ ನೊಂದಣಿ ಸಂಖ್ಯೆ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿ ಪೊಲೀಸರನ್ನೇ ಯಾಮಾರಿಸಲು ಪ್ಲಾನ್ ಮಾಡಿ ಸಿಕ್ಕಿಬಿದ್ದಿದ್ದಾನೆ.ವಾಹನವನ್ನ ವಶಪಡಿಸಿಕೊಂಡ ವಿವಿ ಪುರಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೆಸರೆ ಬಡಾವಣೆ ನಿವಾಸಿ ಮೊಹಮದ್ ಮುಜಾಹಿಲ್ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಐನಾತಿ.ನೊಂದಣಿ ಸಂಖ್ಯೆಗೆ ಸ್ಟಿಕ್ಕರ್ ಅಂಟಿಸಿದ ರಾಯಲ್ ಎನ್ಫೀಲ್ಡ್ ಇದೀಗ ವಿವಿಪುರಂ ಠಾಣೆ ವಶದಲ್ಲಿದೆ.

ನಿನ್ನೆ ವಿವಿಪುರಂ ಸಂಚಾರಿ ಪೊಲೀಸರು ಆಕಾಶವಾಣಿ ಜಂಕ್ಷನ್ ಬಳಿ ಕೋಬ್ರಾ ಗಸ್ತಿನಲ್ಲಿದ್ದಾಗ ನೊಂದಣಿ ಸಂಖ್ಯೆ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿರುವ ರಾಯಲ್ ಎನ್ಫೀಲ್ಡ್ ಬಂದಿದೆ.ಬೈಕ್ ತಡೆಹಿಡಿದು ಯುವಕನನ್ನ ಪ್ರಶ್ನಿಸಿದಾಗ ತಬ್ಬಿಬ್ಬಾಗಿದ್ದಾನೆ.ನೊಂದಣಿ ಸಂಖ್ಯೆ KA09 EV4884 ಮೇಲೆ ಕೊನೆ ಮೂರು ನಂಬರ್ (884) ಗೆ ಕಪ್ಪು ಸ್ಟಿಕ್ಕರ್ ಅಂಟಿಸಿದ್ದಾನೆ.ವಾಹನವನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ ವೇಳೆ ವಿಧಿಸುವ ದಂಡ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಸ್ಟಿಕ್ಕರ್ ಅಂಟಿಸಿರುವುದು ಖಚಿತವಾಗಿದೆ.ವಾಹನ ಮಾಲೀಕ ಮೊಹಮದ್ ಮುಜಾಹಿಲ್ ಸಮೇತ ರಾಯಲ್ ಎನ್ಫೀಲ್ಡ್ ನ ವಶಪಡಿಸಿಕೊಂಡ ಸಂಚಾರಿ ಠಾಣೆ ಎಎಸ್ಸೈ ವೀರಭದ್ರಪ್ಪ ನವರು ವಿವಿ ಪುರಂ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *