ಅಂಧಕಾಸುರ ಸಂಹಾರ ಆಚರಣೆ…ಹೊಸ ಚಿತ್ರ ಬಿಡುಗಡೆ…ಮತ್ತೆ ಅಪಸ್ವರ…ಆಚರಣೆಯಲ್ಲಿ ಮಾರ್ಪಾಡು ತರುವಂತೆ ಆಗ್ರಹ…ಒಪ್ಪದ ಯುವ ಬ್ರಿಗೇಡ್…ಮತ್ತೆ ಗೊಂದಲ…

ಅಂಧಕಾಸುರ ಸಂಹಾರ ಆಚರಣೆ…ಹೊಸ ಚಿತ್ರ ಬಿಡುಗಡೆ…ಮತ್ತೆ ಅಪಸ್ವರ…ಆಚರಣೆಯಲ್ಲಿ ಮಾರ್ಪಾಡು ತರುವಂತೆ ಆಗ್ರಹ…ಒಪ್ಪದ ಯುವ ಬ್ರಿಗೇಡ್…ಮತ್ತೆ ಗೊಂದಲ…

ನಂಜನಗೂಡು,ಜ11,Tv10 ಕನ್ನಡ

ದಕ್ಷಿಣಕಾಶ ನಂಜನಗೂಡಿನಲ್ಲಿ ಪ್ರತಿ ವರ್ಷ ನಡೆಯುವಂತೆ ಆಚರಿಸುವ ಅಂಧಕಾಸುರ ಸಂಹಾರ ಕಾರ್ಯಕ್ರಮಕ್ಕೆ ಮತ್ತೆ ಅಪಸ್ವರ ಬಂದಿದೆ.ಆಚರಣೆಯಲ್ಲಿ ಮಾರ್ಪಾಡು ತರುವಂತೆ ದಲಿತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.ಆದ್ರೆ ಯುವ ಬ್ರಿಗೇಡ್ ದಲಿತ ಸಂಘಟನೆಗಳ ಆಗ್ರಹವನ್ನ ತಿರಸ್ಕರಿಸಿದೆ.ಈ ಮಧ್ಯೆ ಆಕ್ಷೇಪಕ್ಕೆ ಕಾರಣವಾದ ಅಂಧಕಾಸುರನ ಚಿತ್ರಪಟವನ್ನ ಬದಲಾಯಿಸಿ ತಾಲೂಕು ಆಡಳಿತ ಬಿಡುಗಡೆ ಮಾಡಿದೆ.ಇದರಲ್ಲೂ ದಲಿತ ಸಂಘಟನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇಂದು ನಡೆದ ಶಾಂತಿ ಸಭೆ ಗೊಂದಲದಲ್ಲೇ ಮುಗಿದಿದೆ.

ಜ.12 ರಂದು ನಡೆಯಲಿರುವ ಅಂದಾಕಾಸುರ ಸಂಹಾರದ ಧಾರ್ಮಿಕ ಕಾರ್ಯಕ್ರಮ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯದ ಮುಂಭಾಗ ನಡೆಯಬೇಕಿದೆ.
ಕಳೆದ ವರ್ಷ ನಂಜನಗೂಡಿನಲ್ಲಿ ಅಂದಾಕಾಸುರ ಸಂಹಾರದ ವೇಳೆ ಮಹಿಷಾಸುರನ ಭಾವಚಿತ್ರ ಹೋಲುವಂತೆ ಅಂಧಕಾರನ ಚಿತ್ರ ಬಿಡಿಸಿದ ಹಿನ್ನಲೆ ಭಾರಿ ವಿರೋಧ ವ್ಯಕ್ತವಾಗಿತ್ತು.ಈ ಹಿನ್ನಲೆ
ತಾಲ್ಲೂಕು ಆಡಳಿತದ ವತಿಯಿಂದ ಇಂದು ಶಾಂತಿ ಸಭೆ ನಡೆಯಿತು.ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗದೆ ಗೊಂದಲದಲ್ಲೇ ಮುಗಿಯಿತು.
ನಂಜುಂಡೇಶ್ವರನ ಭಕ್ತರು ಹಾಗೂ ಅಂದಾಕಾಸುರ ಸಂಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಭಯ ತಂಡಗಳ ಮುಖಂಡರು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಡಿವೈಎಸ್ ಪಿ ರಘು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು.
ಕಳೆದ ವರ್ಷ ಅಂದಾಕಾಸುರ ಸಂಹಾರದ ವೇಳೆ ಮಹಿಷಾಸುರನ ಚಿತ್ರ ಹೋಲುವ ಪಟ ಹಾಕಿದ್ದರೆಂದು ಆರೋಪಿಸಿ
ಈ ವೇಳೆ ನಂಜುಂಡೇಶ್ವರನ ವಿಗ್ರಹದ ಮೇಲೆ ನೀರು ಎರಚಿ ಅಪಮಾನಿಸಿದ ಘಟನೆ ನಡೆದಿತ್ತು.
ನಂಜನಗೂಡು ಉದ್ವಿಘ್ನವಾಗಿ ಬಂದ್ ಸಹ ಆಚರಿಸಲಾಗಿತ್ತು.
ಈ ಹಿನ್ನೆಲೆ ಈ ವರ್ಷ ನಡೆಯ ಬೇಕಾದ ಅಂದಾಕಾಸುರ ಸಂಹಾರದ ಕುರಿತು ಶಾಂತಿ ಸಭೆ ನಡೆಯಿತು.
ಕಳೆದ ಬಾರಿಯಂತೆ ಸಮಸ್ಯೆ ಆಗ ಬಾರದೆಂದು ಆಕ್ಷೇಪಾರ್ಹವಾದ ಅಂದಾಕಾಸುರನ ಚಿತ್ರ ಬದಲಿಸಿ ರಾಜ್ಯ ಆಗಮ ಶಾಸ್ತ್ರ ಪಂಡಿತರ ಜೊತೆ ಚರ್ಚಿಸಿ ಶಿವ ಪುರಾಣದಲ್ಲಿ ಬರುವ ಅಂದಾಕಾಸುರನ ವರ್ಣನೆಗೆ ತಕ್ಕಹಾಗೆ
ನೂತನ ಚಿತ್ರ ಪಟವನ್ನು ತಹಶಿಲ್ದಾರ್, ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಬಿಡುಗಡೆ ಮಾಡಿದರು.
ನೂತನ ಚಿತ್ರಕ್ಕೆ ಉಭಯ ತಂಡದ ಮುಖಂಡರು ಒಪ್ಪಿಗೆ ಸೂಚಿಸಿದರಾದರೂ
ದಲಿತ ಸಂಘರ್ಷ ಸಮಿತಿಯ ಮಲ್ಲಹಳ್ಳಿ ನಾರಾಯಣ್ ಮಾನವೀಯತೆ ಇಲ್ಲದ ಆಚರಣೆ ಇದು ನಿಲ್ಲ ಬೇಕೆಂದು ಆಗ್ರಹಿಸಿದರು.
ಈ ಆಚರಣೆ ನಿಲ್ಲಿಸ ಬೇಕೆಂದು ನಾವು ಸರ್ಕಾರಕ್ಕೆ ಪತ್ರ ಬರೆದ್ದಿದ್ದೆವೆ.
ಈ ಆಚರಣೆ ನಿಲ್ಲಿಸುವ ಕುರಿತು ಕಾನೂನು ಹೋರಾಟವನ್ನು ಮಾಡುತ್ತಿದ್ದೇವೆ.
ಅಂದಾಕಾಸುರನ ಚಿತ್ರವನ್ನು ಯಾರು ತುಳಿಯ ಬಾರದು ಹಾಗೂ ಅಂದಾಕಾಸುರನ ಚಿತ್ರವನ್ನು ಚಿಕ್ಕದಾಗಿ ಬರೆದುಕೊಂಡು ಆಚರಣೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಒಪ್ಪದ ನಂಜುಂಡೇಶ್ವರ ಭಕ್ತರು.
ಮಹಿಷಾಸುರನ ಹೋಲುವ ಚಿತ್ರ ತೆಗೆಯುವುದು ಅವರ ಬೇಡಿಕೆ.ದೇವಾಲಯದ ಆಡಳಿತ ಮಂಡಳಿ ಬದಲಿಸಿ ಸಮಸ್ಯೆಗೆ ಪರಿಹಾರ ತಂದಿದೆ.
ಆದರೆ ಈಗ ಅಂದಾಕಾಸುರನ ಚಿತ್ರವನ್ನು ತುಳಿಯ ಬಾರದು ಚಿಕ್ಕದಾಗೆ ಚಿತ್ರ ಬರೆಯಬೇಕು ಇಷ್ಟೇ ಇರಬೇಕು ಎಂಬ ಷರತ್ತು ಹಾಕುತ್ತಾ ಬೇರೆ ವರಸೇ ತೆಗೆಯುತ್ತಿರುವುದು ಸರಿಯಲ್ಲ.ಇದು ನಂಜನಗೂಡಿನ ಶಾಂತಿ ಕದಡುವ ಹುನ್ನಾರ.
ಇವರ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ.
ಸರ್ಕಾರದ ಕೈಪಿಡಿಯಲ್ಲಿ ಇರುವಂತೆ ಪರಂಪರಾಗತವಾಗಿ ಏನು ನಡೆದುಕೊಂಡು ಬಂದಿದೇಯೋ ಅದೇ ನಡೆಯಬೇಕು.ಇವರು ಹೇಳಿದಂತೆ ಬದಲಾವಣೆ ಒಪ್ಪಲು ಸಾಧ್ಯವಿಲ್ಲ.ಇದು ನಮ್ಮ ಧಾರ್ಮಿಕ ಆಚರಣೆ ಅದನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ.ಇದೊಂದು ಸಂವಿಧಾನ ವಿರೋಧಿ ನಡೆ.ಈ ಕುರಿತು ನಂಜುಂಡೇಶ್ವರನ ಭಕ್ತರೆಲ್ಲರು ಸೇರೆ ಮುಂದೇ ಏನು ಮಾಡಬೇಕೆಂದು ತೀರ್ಮಾನ ತೆಗೆದುಕೊಳ್ಳಲ್ಲಿದ್ದೇವೆ ಎಂದಿದ್ದಾರೆ.

ಅಂಧಕಾಸುರನ ಸಂಹಾರ ಕಾರ್ಯಕ್ರಮಕ್ಕೆ ಕೇವಲ ಒಂದು ದಿನ ಇದೆ.ಉಭಯತ್ರರ ನಿರ್ಧಾರ ತಾಲೂಕು ಆಡಳಿತಕ್ಕೆ ತಲೆನೋವು ತಂದಿದೆ.ಒಟ್ಟಾರೆ ಅಂಧಕಾಸುರನ ಸಂಹಾರ ವಿವಾದ ಮತ್ತೆ ಮುನ್ನಲೆಗೆ ಬಂದಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *