ಚರಂಡಿಯಲ್ಲಿ ನವಜಾತ ಶಿಶು ಪತ್ತೆಯಾದ ಪ್ರಕರಣ…ತಾಯಿ ಪತ್ತೆ…

ಚರಂಡಿಯಲ್ಲಿ ನವಜಾತ ಶಿಶು ಪತ್ತೆಯಾದ ಪ್ರಕರಣ…ತಾಯಿ ಪತ್ತೆ…

ಎಚ್.ಡಿ.ಕೋಟೆ,ಜ11,Tv10 ಕನ್ನಡ

ನಾಲ್ಕು ದಿನಗಳ ಹಿಂದೆ ನವಜಾತ ಗಂಡು‌ ಶಿಶುವಿನ ಪ್ರಕರಣದ ಸಂಭಂಧ ಇದೀಗ ಪಾಪಿ ತಾಯಿ ಪತ್ತೆಯಾಗಿದ್ದಾಳೆ.ಆರೋಗ್ಯ ಇಲಾಖೆ

ಅಧಿಕಾರಿಗಳು ಹರಸಾಹಸ ನಡೆಸಿ ತಾಯಿಯನ್ನ ಪತ್ತೆ ಮಾಡಿದ್ದಾರೆ.16 ವರ್ಷದ ಅಪ್ರಾಪ್ತ ಬಾಲಕಿಯೇ ಮಗುವಿನ ತಾಯಿ ಆಗಿದ್ದಾಳೆ.ಮದುವೆಯಾಗದೇ ಇದ್ದರೂ ಮಗು ಜನಿಸಿದ್ದರಿಂದ ಮಗು ಜೀವಂತವಾಗಿ ಚರಂಡಿಗೆ ಎಸೆದಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ.ತಾಯಿ ಮಾಡಿದ ತಪ್ಪಿಗೆ ಮಗು ಅನಾಥವಾಗಿ ಜಿಲ್ಲಾಸ್ಪತ್ರೆಯ ಆಶ್ರಯದಲ್ಲಿದೆ.
ಎಚ್.ಡಿ.ಕೋಟೆ ತಾಲೋಕಿನ ರಾಜೇಗೌಡನಹುಂಡಿ ಗ್ರಾಮದಲ್ಲಿ ಘಟನೆ ನಡೆದಿತ್ತು.ರಾಜೇಗೌಡನಹುಂಡಿ ಗ್ರಾಮದ ಅಪ್ರಾಪ್ತ ಬಾಲಕಿಯೇ ಮಗು ಚರಂಡಿಗೆಸಿದಿರುವುದು ಬೆಳಕಿಗೆ ಬಂದಿದೆ. ಮಗು ಚರಂಡಿಗೆಸೆದು ಖಾಸಗಿ ಆಸ್ಪತ್ರೆ ವೈದ್ಯರಲ್ಲಿ ಹೆರಿಗೆ ಮರೆಮಾಚಿ ಹೊಟ್ಟೆನೋವೆಂದು ಹೇಳಿ ಚಿಕಿತ್ಸೆ ಪಡೆದಿದ್ದಾಳೆ.ಕಳೆದ ವರ್ಷ ಬಾಲಕಿಗೆ ವಿವಾಹ ನೆರವೇರಿಸಲು ಸಿದ್ದತೆ ನಡೆದಿದ್ದು ಸಿಡಿಪಿಒ ಇಲಾಖೆ ಮಧ್ಯ ಪ್ರವೇಶದಿಂದ ತಡೆ ಹಿಡಿಯಲಾಗಿತ್ತು.
ಸಧ್ಯದ ಸ್ಥಿತಿಯಲ್ಲಿ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಗು ತಾಯಿ ಮಡಿಲಿಗೆ ಸೇರಿಸಲು ಅಧಿಕಾರಿಗಳ ಹರಸಾಹಸ ನಡೆಸುತ್ತಿದ್ದಾರೆ.ಮತ್ತೊಂದೆಡೆ ಮಗು ಬೇಡವೇ
ಬೇಡ ಎಂದು ತಾಯಿ ನಿರಾಕರಿಸುತ್ತಿದ್ದಾಳೆ.
ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲೆಯಲ್ಲೇ ಬಾಲ್ಯವಿವಾಹದಲ್ಲಿ ಎಚ್.ಡಿ.ಕೋಟೆ ತಾಲೋಕು ಪ್ರಥಮ ಸ್ಥಾನದಲ್ಲಿದ್ದು ಇಂದಿಗೂ ತಾಲೋಕಿನಲ್ಲಿ ಕದ್ದುಮುಚ್ಚಿ ಬಾಲ್ಯವಿವಾಹಗಳು ನಡೆಯುತ್ತಿವೆ.
ಬಾಲ್ಯವಿವಾಹ ಅಪರಾಧ ಎಂದು ಕಾನೂನು ಅರಿವು ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನತೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *