ತಂದೆಯಾದ ಸಂಭ್ರಮದಲ್ಲೇ ಕೊನೆ ಉಸಿರೆಳೆದ ತಂದೆ…ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ಮನಕಲಕುವ ಘಟನೆ…
- TV10 Kannada Exclusive
- January 13, 2025
- No Comment
- 152
ಮೈಸೂರು,ಜ13,Tv10 ಕನ್ನಡ
ತಂದೆಯಾದ ಸಂಭ್ರಮದಲ್ಲಿ ರಾತ್ರಿ ಮಲಗಿದ ತಂದೆ ಚಿರನಿದ್ರೆಗೆ ಜಾರಿದ ಮನಕಲಕುವ ಘಟನೆ ಮೈಸೂರಿನ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ನಡೆದಿದೆ.ಆಸ್ಪತ್ರೆಯಲ್ಲಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ರೆ ಇತ್ತ ಪತಿ ರಾತ್ರಿ ಸಂತಸದಿಂದ ಮಲಗಿದವರು ಮುಂಜಾನೆಯ ಸೂರ್ಯನ ಕಿರಣಗಳನ್ನ ನೋಡಿಲ್ಲ.ಜನ್ಮ ನೀಡಿದ ತಾಯಿ ಚೆಲುವಾಂಬ ಆಸ್ಪತ್ರೆಯ ಐಸಿಯೂ ನಲ್ಲಿ ಚೇತರಿಸಿಕೊಳ್ಳುತ್ತಿದ್ದರೆ ಪತಿ ಆಸ್ಪತ್ರೆ ಆವರಣದಲ್ಲಿ ರಾತ್ರಿ ಮಲಗಿದವರು ಸಾವಿಗೆ ಶರಣಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ಗ್ರಾಮದ ರಾಜೇಶ್(35) ಮೃತ ದುರ್ದೈವಿ.ಪತ್ನಿ ಅಶ್ವತ್ಥಮ್ಮ ಐಸಿಯೂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೂರು ದಿನಗಳ ಹಿಂದೆ ಪತ್ನಿಯನ್ನ ರಾಜೇಶ್ ಹೆರಿಗೆ ನೋವಿನ ಹಿನ್ನಲೆ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ್ರು.ಅಶ್ವತ್ಥಮ್ಮರನ್ನ ಐಸಿಯೂ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ರೋಗಿಗಳ ಜೊತೆ ಬರುವ ಸಹಾಯಕರಿಗೆ ತಂಗಲು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.ಆದ್ರೆ ಸದರಿ ಸ್ಥಳದಲ್ಲಿ ನಿಗದಿಗಿಂತ ಹೆಚ್ಚಿನ ಜನ ತಂಗಿದ್ದ ಕಾರಣ ರಾಜೇಶ್ ರಾತ್ರಿ ವೇಳರ ಮಲಗಲು ಸಾಧ್ಯವಾಗದೆ ಆಸ್ಪತ್ರೆಯ ಹೊರ ಆವರಣದಲ್ಲಿ ಮಲಗಿದ್ದಾರೆ.ಮೂರು ದಿನಗಳಿಂದ ಇದೇ ಸ್ಥಳದಲ್ಲಿ ರಾಜೇಶ್ ಮಲಗುತ್ತಿದ್ದರೆಂದು ಹೇಳಲಾಗಿದೆ.ನಿನ್ನೆ ರಾತ್ರಿಯೂ ರಾಜೇಶ್ ಇದೇ ಸ್ಥಳದಲ್ಲಿ ಮಲಗಿದ್ದವರು ಬೆಳಿಗ್ಗೆ ಕೊನೆ ಉಸಿರೆಳೆದಿದ್ದಾರೆ.ರಾಜೇಶ್ ರವರ ಸಾವಿಗೆ ನಿಝರ ಕಾರಣ ತಿಳಿದು ಬಂದಿಲ್ಲವಾದರೂ ರಾತ್ರಿ ವೇಳೆ ಕೊರೆವ ಚಳಿಯಿಂದಾಗಿ ಹೃದಯಾಘಾತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.ಒಟ್ಟಾರೆ ರಾಜ್ಯದ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವುದು ವಿಷಾಧನೀಯ.ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗೆ ಇದೊಂದು ಕಹಿ ಉದಾಹರಣೆ ಎಂದರೂ ತಪ್ಪಿಲ್ಲ…