ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಎಫೆಕ್ಟ್…ವೈದ್ಯನಿಗೆ 29.70 ಲಕ್ಷ ಉಂಡೆನಾಮ…

ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಎಫೆಕ್ಟ್…ವೈದ್ಯನಿಗೆ 29.70 ಲಕ್ಷ ಉಂಡೆನಾಮ…

ಮೈಸೂರು,ಜ20,Tv10 ಕನ್ನಡ

ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಒಂದರ ಮೆಸೇಜ್ ಫಾಲೋ ಮಾಡಿದ ಮೈಸೂರಿನ ವೈದ್ಯರೊಬ್ಬರು 29.71 ಲಕ್ಷ ಹಣ ಕಳೆದುಕೊಂಡಿದ್ದಾರೆ.ಶ್ರೀರಾಂಪುರ ನಿವಾಸಿ ಡಾ.ಪಿ.ಶ್ರೀನಿವಾಸ ಮೂರ್ತಿ ಹಣ ಕಳೆದುಕೊಂಡವರು.ಈ ಕುರಿತಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೂಟ್ಯೂಬ್ ವೀಕ್ಷಿಸುತ್ತಿದ್ದ ವೇಳೆ ಲಿಂಕ್ ಒಂದು ಬಂದಿದೆ.ಇದನ್ನ ಓಪನ್ ಮಾಡಿದಾಗ ಇಂಟರ್ ನ್ಯಾಷನಲ್ ಕಾಂಪಿಟೇಷನ್ ನಲ್ಲಿ ಭಾಗವಹಿಸಲು ಇಚ್ಛೆ ಇದೆಯಾ ಎಂದು ಕೇಳಿದ್ದಾರೆ.ಇದಕ್ಕೆ ಡಾ.ಶ್ರೀನಿವಾಸ ಮೂರ್ತಿ ಒಪ್ಪಿಕೊಂಡು ಅವರು ಹೇಳಿದಂತೆ ಕೆವೈಸಿ ಅಪಡೇಟ್ ಮಾಡಿಕೊಟ್ಟಿದ್ದಾರೆ.ನಂತರ ಇನ್ವೆಸ್ಟ್ ಮಾಡುವಂತೆ ಸಲಹೆ ನೀಡಿದ್ದಾರೆ.ಇದಕ್ಕಾಗಿ ವಂಚಕ ಹೇಳಿದ್ದ ಆಪ್ ಒಂದನ್ನ ಡೌನ್ ಲೋಡ್ ಮಾಡಿಕೊಂಡಿದ್ದಾರೆ.ನಂತರ IPO ಅಕೌಂಟ್ ಕ್ರಿಯೇಟ್ ಮಾಡಿ ಇನ್ವೆಸ್ಟ್ ಮಾಡುವಂತೆ ಸೂಚನೆ ನೀಡಿದ್ದಾರೆ.ನಂತರ 26 ಲಕ್ಷ ಮೊತ್ತದ ಟಾಸ್ಕ್ ನೀಡಿ ಕಂಪ್ಲೀಟ್ ಮಾಡುವಂತೆ ತಿಳಿಸಿದ್ದಾರೆ.ತಮ್ಮ ಬಳಿ ಹಣ ಇಲ್ಲವೆಂದು ತಿಳಿಸಿದಾಗ ಖಾತೆಯಲ್ಲಿ 5 ಲಕ್ಷ ಇದೆ ಅಲ್ಲದೆ ಸಪೋರ್ಟಿಂಗ್ ಫಂಡ್ 10 ಲಕ್ಷ ಕಂಪನಿಯಿಂದ ನೀಡಲಾಗುತ್ತದೆ ಎಂದು ನಂಬಿಸಿದ್ದಾರೆ.ಇದನ್ನ ನಂಬಿದ ಶ್ರೀನಿವಾಸ ಮೂರ್ತಿ ರವರು ಹಣ ಹೂಡಲು ಮುಂದಾಗಿದ್ದಾರೆ.ಈ ವೇಳೆ ಖಾತೆಯಲ್ಲಿ ಲಾಭಾಂಶ ತೋರಿಸಿದೆ.ಹಣ ವಿತ್ ಡ್ರಾ ಮಾಡಲು ಮುಂದಾದಾಗ ಸಪೋರ್ಟಿಂಗ್ ಫಂಡ್ ಹಿಂದಿರುಗಿಸುವಂತೆ ಸೂಚನೆ ನೀಡಿದ್ದಾರೆ.ಅಲ್ಲದೆ 3.06 ಲಕ್ಷ ಟ್ಯಾಕ್ಸ್ ಪೇ ಮಾಡುವಂತೆ ಸೂಚನೆ ನೀಡಿದ್ದಾರೆ.ವಂಚಕರ ಮಾತು ನಂಬಿ ಶ್ರೀನಿವಾಸ ಮೂರ್ತಿ ರವರು ಹಂತ ಹಂತಗಳಲ್ಲಿ 29,71.442/- ರೂ ಗಳನ್ನ ವರ್ಗಾಯಿಸಿದ್ದಾರೆ.ನಂತರ ತಾವು ಮೋಸ ಹೋಗಿರುವುದು ಖಚಿತವಾಗಿದೆ.ಡಾ.ಶ್ರೀನಿವಾಸ ಮೂರ್ತಿ ರವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…
ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ… ಮೈಸೂರು,ಸೆ15,Tv10 ಕನ್ನಡ ಸಾಹಸಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 18ರಂದು…

Leave a Reply

Your email address will not be published. Required fields are marked *