ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ರಾಸುಗಳ ರಕ್ಷಣೆ…ಬೊಲೆರೋ ಪಿಕ್ ಅಪ್ ವಾಹನ ಸೀಜ್…
- TV10 Kannada Exclusive
- January 22, 2025
- No Comment
- 88
ಮೈಸೂರು,ಜ21,Tv10 ಕನ್ನಡ
ಬೊಲೆರೋ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ,ಅಮಾನವೀಯವಾಗಿ ಸಾಗಿಸುತ್ತಿದ್ದ 13 ರಾಸುಗಳನ್ನ ಪೊಲೀಸರು ರಕ್ಷಿಸಿದ್ದಾರೆ.ಈ ಸಂಭಂಧ ವಾಹನವನ್ನ ವಶಪಡಿಸಿಕೊಂಡಿದ್ದಾರೆ.ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಬೋಗಾದಿ ರಿಂಗ್ ರಸ್ತೆ ಜಂಕ್ಷನ್ ನಲ್ಲಿ ಹೆಬ್ಬಾಳ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಧನರಾಜ್ ರವರು ಗರುಡಾ ವಾಹನದ ಗಸ್ತಿನಲ್ಲಿದ್ದಾಗ ಗದ್ದಿಗೆ ಮಾರ್ಗವಾಗಿ ಮೈಸೂರಿನತ್ತ ಬೊಲೆರೋ ಪಿಕ್ ಅಪ್ ವಾಹನ ಬಂದಿದೆ.ವಾಹನವನ್ನ ನಿಲ್ಲಿಸಿ ಪರಿಶೀಲಿಸಿದಾಗ ಕಿರಿದಾದ ಜಾಗದಲ್ಲಿ 13 ರಾಸುಗಳನ್ನ ಅಮಾನವೀಯವಾಗಿ ಹಿಂಸೆಯಾಗುವಂತೆ ತುಂಬಿರುವುದು ಕಂಡುಬಂದಿದೆ.ಈ ವೇಳೆ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ.ರಾಸುಗಳನ್ನ ರಕ್ಷಿಸಿದ ಧನರಾಜ್ ರವರು ಸರಸ್ವತಿಪುರಂ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ರಕ್ಷಿಸಲಾದ ರಾಸುಗಳನ್ನ ಪಿಂಜರಾಪೋಲ್ ಗೆ ಸಾಗಿಸಲಾಗಿದೆ.ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…