
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಜೊತೆ ತಹಸೀಲ್ದಾರ್ ಸಭೆ…ಕಿರುಕುಳ ನೀಡದಂತೆ ಎಚ್ಚರಿಕೆ…
- TV10 Kannada Exclusive
- January 22, 2025
- No Comment
- 55


ನಂಜನಗೂಡು,ಜ21,Tv10 ಕನ್ನಡ
ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಗ್ರಾಮ ತೊರೆಯುತ್ತಿರುವ ಕುಟುಂಬಗಳ ಬೆಳವಣಿಗೆಗೆ ಬ್ರೇಕ್ ಹಾಕಲು ನಂಜನಗೂಡು ತಾಲೂಕು ಆಡಳಿತ ಹೆಜ್ಜೆ ಹಾಕಿದೆ.ಇಂದು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್ ಹಾಗೂ ಹುಲ್ಲಹಳ್ಳಿ ಠಾಣೆ ನಿರೀಕ್ಷಕರಾದ ಚಂದ್ರಶೇಖರ್ ಪಿಎಸ್ಸೈ ಚೇತನ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ಸಿಬ್ಬಂದಿ ಹಾಗೂ ಮುಖ್ಯಸ್ಥರಿಗೆ ತಹಸೀಲ್ದಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.ಸಾಲ ನೀಡುವ ಮುನ್ನ ವಸೂಲಿ ಮಾಡುವ ರೀತಿಯನ್ನ ತಿಳಿಸುವುದು,ಒಬ್ಬಂಟಿ ಮಹಿಳೆ ಇರುವ ಮನೆಗಳಿಗೆ ಹೋಗಿ ಧಂಕಿ ಹಾಕುವುದನ್ನ ನಿಲ್ಲಿಸಬೇಕು,ಸಾಲ ಪಡೆಯುವಾಗ ಹೆಚ್ಚುವರಿ ಬಡ್ಡಿ ಹಾಕದಂತೆ,ಬಡ್ಡಿಯ ಮಾಹಿತಿಯನ್ನ ತಾಲೂಕು ದಂಡಾಧಿಕಾರಿಗಳು ಹಾಗೂ ಆರ್ ಬಿ ಐ ಗಮನಕ್ಕೆ ಸಂಪೂರ್ಣ ಮಾಹಿತಿ ನೀಡುವುದು,ಸಾಲವನ್ನ ಬಲವಂತವಾಗಿ ವಸೂಲಿ ಮಾಡದೆ ಕಾನೂನು ಬದ್ದವಾಗಿ ವಸೂಲಿ ಮಾಡುವಂತೆ,ಮನೆ ಮುಂದೆ ನಿಂತು ಗೌರವಕ್ಕೆ ಕುಂದು ತರುವ ಪ್ರಕ್ರಿಯೆ ನಿಲ್ಲಿಸಬೇಕು ಎಂಬುದೇ ಸೇರಿದಂತೆ ಇನ್ನಿತರ ಕಂಡೀಷನ್ ಗಳನ್ನ ಹಾಕಿ ವಾರ್ನಿಂಗ್ ನೀಡಿದ್ದಾರೆ.ಹಾಗೊಮ್ಮೆ ಕಿರುಕುಳ ನೀಡುವುದನ್ನ ಮುಂದುವರೆಸಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.ಇದೇ ವೇಳೆ ನಂಜನಗೂಡು ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮೈಕ್ರೋ ಫೈನಾನ್ಸ್ ಗಳ ಸಿಬ್ಬಂದಿಗಳ ಜೊತೆ ಸಭೆ ನಡೆಸಿ ಎಚ್ಚರಿಕೆ ನೀಡುವಂತೆ ಸಂದೇಶ ರವಾನಿಸಿದ್ದಾರೆ…