ನಂಜನಗೂಡು ನಗರಸಭೆ ಬಜೆಟ್ ಪೂರ್ವಭಾವಿ ಸಭೆ…ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ…ಕುರ್ಚಿಗಳು ಖಾಲಿ..ಖಾಲಿ…

ನಂಜನಗೂಡು ನಗರಸಭೆ ಬಜೆಟ್ ಪೂರ್ವಭಾವಿ ಸಭೆ…ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ…ಕುರ್ಚಿಗಳು ಖಾಲಿ..ಖಾಲಿ…

ನಂಜನಗೂಡು,ಜ21,Tv10 ಕನ್ನಡ

ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನ ಪಡೆಯುವ ಉದ್ದೇಶದಿಂದ ನಂಜನಗೂಡು ನಗರಸಭೆ ಬಜೆಟ್ ನ ಪೂರ್ವಭಾವಿ ಸಭೆ ಇಂದು ಕರೆಯಲಾಗಿತ್ತು.ಬಜೆಟ್ ಗೆ ಅಭಿಪ್ರಾಯಗಳನ್ನ ನೀಡಬೇಕಿದ್ದ ಸಾರ್ವಜನಿಕರೇ ಇಲ್ಲದ ಕಾರಣ ನೀರಸ ಪ್ರತಿಕ್ರಿಯೆ ದೊರೆಯಿತು.

ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಕಂಠಸ್ವಾಮಿ ಹಾಗೂ ಪೌರಾಯುಕ್ತರಾದ ವಿಜಯ್ ರವರ ನೇತೃತ್ವದಲ್ಲಿ 2025-26 ನೇ ಸಾಲಿನ ಆಯವ್ಯಯ ಸಿದ್ದಪಡಿಸಲು ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನ ಪಡೆಯಲು ಆಯೋಜಿಸಲಾಗಿತ್ತು.ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಸಂಘಟನೆಯ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನ ತಿಳಿಸಬೇಕಿತ್ತು.ಆದ್ರೆ ಸಭೆ ಆರಂಭವಾಗಿ ಗಂಟೆಗಳು ಉರುಳಿದರೂ ಸಾರ್ವಜನಿಕರು ಆಗಮಿಸದೆ ಸಭೆ ಮಂಕಾಯಿತು.ಕೆಲವು ಪತ್ರಕರ್ತರು ಬೆರಳೆಣಿಕೆಯ ಸಾಋವಜನಿಕರು ಹೊರತುಪಡಿಸಿದ್ರೆ ಸಭೆಗೆ ನೀರಸ ಪ್ರತಿಕ್ರಿಯೆ ದೊರೆಯಿತು.ಸಭೆಯಲ್ಲಿ ಸಾರ್ವಜನಿಕರ ಅನುಪಸ್ಥಿತಿ ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೆ ಮುಜುಗರ ತಂದಿತ್ತು.ನಂಜನಗೂಡು ನಗರದಲ್ಲಿ ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆಧ್ಯತೆ ನೀಡುವುದಾಗಿ ತಿಳಿಸಿ ಸಭೆಯನ್ನ ಅಂತ್ಯಗೊಳಿಸಿದರು.

ಅಭಿವೃದ್ದಿಗೆ ಒತ್ತು ನೀಡದ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಬೇಸತ್ತಿರುವ ಸಾರ್ವಜನಿಕರು ಸಭೆಗೆ ಗೈರಾಗಿರುವ ಮಾಹಿತಿ ಇದೆ. ಈ ಬೆಳವಣಿಗೆ ನಂಜನಗೂಡಿನ ಸರ್ವತೋಮುಖ ಅಭಿವೃದ್ದಿಗೆ ಮಾರಕ ಎಂದೇ ಹೇಳಲಾಗುತ್ತಿದೆ.ಸಾರ್ವಜನಿಕರ ಗೈರಂತೂ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷತೆ ವಹಿಸಿದವರಿಗೆ ಮುಖಭಂಗವಾದಂತಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *