ಸ್ವಚ್ಛ ಭಾರತ ಯೋಜನೆಗೆ ಸಡ್ಡು ಹೊಡೆದ ನಗರ್ಲೆ ಗ್ರಾ.ಪಂ…ಎಲ್ಲೆಲ್ಲೂ ರಾಶಿ…ರಾಶಿ..ಕಸ…ಅಧಿಕಾರಿಗಳ ನಿರ್ಲಕ್ಷ್ಯತೆಗೆ ಮೂಕ ಸಾಕ್ಷಿ…
- TV10 Kannada Exclusive
- January 23, 2025
- No Comment
- 22
ನಂಜನಗೂಡು,ಜ23,Tv10 ಕನ್ನಡ
ಸ್ವಚ್ಛ ಭಾರತ ಯೋಜನೆಗೆ ನಗರ್ಲೆ ಗ್ರಾಮ ಪಂಚಾಯ್ತಿ ಸಡ್ಡು ಹೊಡೆದಂತೆ ಕಾಣುತ್ತಿದೆ.ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸ್ವಚ್ಛತೆಯನ್ನೇ ಮರೆತಂತಿದ್ದಾರೆ.ಗ್ರಾಮದ ರಸ್ತೆಗಳ ಅಕ್ಕಪಕ್ಕದಲ್ಲಿ ಕಸದ ರಾಶಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತೆಗೆ ಮೂಕ ಸಾಕ್ಷಿಯಂತೆ ಬಿಂಬಿಸುತ್ತಿದೆ.ಸ್ವಚ್ಛತೆಗಾಗಿ ಗ್ರಾಮ ಪಂಚಾಯ್ತಿ ದಾಖಲೆಗಳಲ್ಲಿ ಹಣ ಖರ್ಚಾಗುತ್ತಿದೆ.ಆದ್ರೆ ಇಲ್ಲಿ ಸ್ವಚ್ಛತೆ ಮಾಯವಾಗಿದೆ.ರೋಗಗಳ ಭೀತಿಯಿಂದಾಗ ಸ್ಥಳೀಯರು ಆತಂಕದಲ್ಲಿರುವಾಗ ಕಸದ ರಾಶಿಗಳು ಮತ್ತಷ್ಟು ಆತಂಕಕ್ಕೆ ದೂಡುತ್ತಿವೆ.ಇನ್ನಾದ್ರೂ ಅಧಿಕಾರಿಗಳು ಮೈಗೊಡವಿ ಎದ್ದು ನಿಂತು ಸ್ವಚ್ಛತೆಗೆ ಆಧ್ಯತೆ ನೀಡುವರೇ…?