
ಫೋಟೋ ಎಡಿಟ್ ಮಾಡಿ ವಿವಾಹಿತೆಗೆ ಬ್ಲಾಕ್ ಮೇಲ್…ಯುವತಿ ಸೇರಿದಂತೆ ಮೂವರ ವಿರುದ್ದ FIR…ಯುವತಿ ಸುಸೈಡ್…ಮಹಿಳೆ ಸಂಸಾರದಲ್ಲಿ ಬಿರುಕು…
- TV10 Kannada Exclusive
- January 28, 2025
- No Comment
- 223
ಮೈಸೂರು,ಜ28,Tv10 ಕನ್ನಡ
ಸಂಭಂಧಿಕನೊಬ್ಬ ವಿವಾಹಿತ ಮಹಿಳೆಯ ಫೋಟೋಸ್ ಕೆಟ್ಟದಾಗಿ ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಭಂಧಿಸಿದಂತೆ ನೊಂದ ಮಹಿಳೆ ಯುವತಿ ಸೇರಿದಂತೆ ಮೂವರ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.FIR ದಾಖಲಾಗುತ್ತಿದ್ದಂತೆಯೇ ಯುವತಿ ನೇಣಿಗೆ ಶರಣಾಗಿದ್ದಾಳೆ.ಎಡಿಟ್ ಮಾಡಿದ ಫೋಟೋಗಳು ಗಂಡನ ಮೊಬೈಲ್ ಗೆ ರವಾನೆ ಆಗುತ್ತಿದ್ದಂತೆಯೇ ವಿವಾಹಿತ ಮಹಿಳೆಯ ಸಂಸಾದಲ್ಲಿ ಬಿರುಕು ಮೂಡಿದೆ.ಸಂಭಂಧಿಕನೊಬ್ಬನ ಜೊತೆ ಮಹಿಳೆ ಮಾಡಿದ ಸ್ನೇಹದ ಪರಿಣಾಮ ಆಕೆಯ ಸಂಸಾರ ಬಿರುಗಾಳಿಗೆ ಸಿಲುಕಿದ ಹಡಗಿನಂತಾದರೆ ಮತ್ತೊಂದೆಡೆ ಓರ್ವ ಅಮಾಯಕಿ ಸಾವಿಗೆ ಕಾರಣವಾಗಿದೆ.
ವಿಜಯನಗರ ನಿವಾಸಿ ಕಾವೇರಿ ಹಾಗೂ ಗುಂಡ್ಲುಪೇಟೆ ನಿವಾಸಿ ನಂದೀಶ್ ಕುಮಾರ್ ನಡುವಿನ ಸ್ನೇಹ ಸಾಕಷ್ಟು ಎಡವಟ್ಟುಗಳಿಗೆ ಕಾರಣವಾಗಿದೆ.ಕಾವೇರಿಗೆ ನಂದೀಶ್ ಕುಮಾರ್ ದೂರದ ಸಂಭಂಧಿಕ.ಪರಿಚಯದಿಂದಾಗಿ ಹಿಂದೆ ಇಬ್ಬರೂ ಕೆಲವು ಫೋಟೋಗಳನ್ನ ತೆಗೆದುಕೊಂಡಿದ್ದಾರೆ.2023 ರಲ್ಲಿ ಕಾವೇರಿ ಶಿವು ಎಂಬಾತನ ಜೊತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ರು.ಮದುವೆ ನಂತರ ಕಾವೇರಿಗೆ ನಂದೀಶ್ ಕುಮಾರ್ ತನ್ನ ಜೊತೆ ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸಿದ್ದಾನೆ.ಇದನ್ನ ನಿರಾಕರಿಸಿದಾಗ ಹಿಂದೆ ಜೊತೆ ಇದ್ದ ಫೋಟೋಗಳನ್ನ ಎಡಿಟ್ ಮಾಡಿ ಗಂಡನಿಗೆ ಕಳುಹಿಸಿದ್ದಾನೆ.ನಾನುಬಕರೆದಾಗ ಬರಲಿಲ್ಲ ಅಂದ್ರೆ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ.ನಂದೀಶ್ವಕುಮಾರ್ ಟಾರ್ಚರ್ ಗೆ ಬೇಸತ್ತ ಕಾವೇರಿ ಕೆಲವು ದಿನಗಳ ಹಿಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ನಿನ್ನನ್ನು ಅನುಭವಿಸಲೇ ಬೇಕು ಇಲ್ಲದಿದ್ದಲ್ಲಿ ನಿನ್ನ ಗಂಡನ ಜೊತೆ ಸಂಸಾರ ಮಾಡಲು ಬಿಡುವುದಿಲ್ಲ ಎಂದು ಕಿರುಕುಳ ನೀಡುತ್ತಿದ್ದ ನಂದೀಶ್ ಕುಮಾರ್ ಹಾಗೂ ಬೆಂಬಲ ನೀಡುತ್ತಿರುವ ಮಹೇಶ್ ಮತ್ತು ಕೆಲವು ಫೋಟೋಗಳನ್ನ ನೀಡಿದ ಆರೋಪದ ಮೇಲೆ ಗುಂಡ್ಲುಪೇಟೆಯ ಕವನ ಎಂಬ ಯುವತಿ ಮೇಲೆ ಕಾವೇರಿ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
FIR ದಾಖಲಾಗುತ್ತಿದ್ದಂತೆಯೇ ಗುಂಡ್ಲುಪೇಟೆ ಚೆನ್ನಮಲ್ಲಿಪುರ ಗ್ರಾಮದಲ್ಲಿ ಯುವತಿ ಕವನ ನಾಲ್ಕು ಜನರ ಹೆಸರನ್ನ ಮನೆ ಬಾಗಿಲ ಮೇಲೆ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಈ ಸಂಭಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಕಾವೇರಿ ವಿರುದ್ದ ಪ್ರಕರಣ ದಾಖಲಾಗಿದೆ.ಒಟ್ಟಾರೆ ನಂದೀಶ್ ಕುಮಾರ್ ಎಡಿಟ್ ಮಾಡಿ ಬಿಟ್ಟ ಫೋಟೋಗಳು ತಂದ ಎಡವಟ್ಟು ಓರ್ವ ಯುವತಿಯನ್ನ ಬಲಿ ಪಡೆದಿದೆ.ಓರ್ವ ವಿವಾಹಿತ ಮಹಿಳೆ ಬಾಳಲ್ಲಿ ಬಿರುಗಾಳಿ ಬೀಸಿದಂತಾಗಿದೆ…