
ಮೈಕ್ರೋ ಫೈನಾನ್ಸ್ ನಾಲ್ವರು ಸಿಬ್ಬಂದಿಗಳು ಅರೆಸ್ಟ್…ಕಿರುಕುಳಕ್ಕೆ ಕಡಿವಾಣ ಹಾಕುತ್ತಿರುವ ಖಾಕಿ ಪಡೆ…
- TV10 Kannada Exclusive
- January 29, 2025
- No Comment
- 76

ನಂಜನಗೂಡು,ಜ29,Tv10 ಕನ್ನಡ
ಮೈಕ್ರೋ ಫೈನಾನ್ಸ್ ಗಳ ಅಬ್ಬರಕ್ಕೆ ಹುಲ್ಲಹಳ್ಳಿ ಠಾಣೆ ಪೊಲೀಸರು ಮೂಗುದಾರ ಹಾಕಲು ಮುಂದಾಗಿದ್ದಾರೆ.5 ಮೈಕ್ರೋ ಫೈನಾನ್ಸ್ ಗಳ ವಿರುದ್ದ FIR ದಾಖಲಿಸಿದ್ದ ಪೊಲೀಸರು ಇದೀಗ ಮತ್ತೊಂದು ಹೆಜ್ಜೆ ಹಾಕಿದ್ದಾರೆ.ಪ್ರಕರಣ ದಾಖಲಾದ ಫೈನಾನ್ಸ್ ಕಂಪನಿಗಳ ನಾಲ್ವರು ಸಿಬ್ಬಂದಿಗಳನ್ನ ಅರೆಸ್ಟ್ ಮಾಡಿ ಕಂಬಿ ಎಣಿಸಲು ಕಳಿಸಿದ್ದಾರೆ.ಬಿಎಸ್ ಎಸ್ ಫೈನಾನ್ಸ್ ನ ಕಲೆಕ್ಷನ್ ಆಫೀಸರ್ ಆಕಾಶ್(22),ಗ್ರಾಮೀಣ ಕೂಟ ಫೈನಾನ್ಸ್ ನ ಕಲೆಕ್ಷನ್ ಆಫೀಸರ್ ಸಿದ್ದರಾಜು(23),ಉಜ್ಜೀವನ್ ಫೈನಾನ್ಸ್ ನ ಕಸ್ಟಮರ್ ರಿಲೇಷನ್ ಆಫೀಸರ್ ಲೋಕೇಶ್(25) ಹಾಗೂ ಐಡಿಎಫ್ ಸಿ ಫೈನಾನ್ಸ್ ನ ಗ್ರೂಪ್ ರಿಲೇ಼ಷನ್ ಮ್ಯಾನೇಜರ್ ಸಿದ್ದರಾಜು(28) ಬಂಧಿತ ಸಿಬ್ಬಂದಿಗಳು.ಸಾಲಗಾರರ ಜೊತೆ ಸಾಲ ವಸೂಲಿ ಮಾಡುವಾಗ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರು ಸಿಬ್ಬಂದಿಗಳನ್ನ ಬಂಧಿಸಲಾಗಿದೆ.
ಎರಡು ದಿನಗಳ ಹಿಂದೆ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ ಎಂಬುವರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು.ಪತ್ನಿ ಲತಾ ರವರು 5 ಮೈಕ್ರೋ ಫೈನಾನ್ಸ್ ಗಳ ವಿರುದ್ದ ಪ್ರಕರಣ ದಾಖಲಿಸಿದ್ದರು.ಪ್ರಕರಣ ದಾಖಲಿಸಿಕೊಂಡ ಹುಲ್ಲಹಳ್ಳಿ ಪೊಲೀಸರು ನಾಲ್ಕು ಫೈನಾನ್ಸ್ ಕಂಪನಿ ಸಿಬ್ಬಂದಿಗಳನ್ನ ಅರೆಸ್ಟ್ ಮಾಡಿ ಕಂಬಿ ಎಣಿಸಲು ಕಳಿಸಿದ್ದಾರೆ.ಧರ್ಮಸ್ಥಳ ಸ್ತ್ರೀ ಶಕ್ತಿ ಸಂಘದ ಮೇಲೆ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲೆ ಪ್ರಕರಣ ದಾಖಲಾದಾಗ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.ಆದ್ರೆ ಇಲ್ಲಿ ಕೇವಲ ಸಿಬ್ಬಂದಿಗಳನ್ನ ಮಾತ್ರ ಬಂಧಿಸಿರುವುದು ಕೆಲವು ಅನುಮಾನಗಳನ್ನ ಹುಟ್ಟಿಹಾಕಿದಂತಾಗಿದೆ…