
ಸೆಲ್ಫೀ ಹುಚ್ಚಾಟ…ವಿದೇಶಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ…ಪೊಲೀಸರ ಅತಿಥಿಯಾದ ಆಟೋ ಡ್ರೈವರ್…
- TV10 Kannada Exclusive
- February 1, 2025
- No Comment
- 200
ಮೈಸೂರು,ಫೆ1,Tv10 ಕನ್ನಡ
ವಿದೇಶಿ ಮಹಿಳೆಯ ಜೊತೆ ಸೆಲ್ಫೀ ತೆಗೆದುಕೊಳ್ಳುವ ಸಂಭಂಧ ಅಸಭ್ಯವಾಗಿ ವರ್ತಿಸಿದ ಊಬರ್ ಆಟೋ ಡ್ರೈವರ್ ಪೊಲೀಸರ ಅತಿಥಿಯಾದ ಘಟನೆ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಊಬರ್ ಆಟೋ ಡ್ರೈವರ್ ರಂಜನ್ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಸ್ಪೇನ್ ದೇಶದ ಮಹಿಳೆ ಮರಿಯಾ ನೋಯಲ್ ಕಟಲಡೋ ರೋಡ್ರಿಗ್ಸ್ ರವರು ಪ್ರಕರಣ ದಾಖಲಿಸಿದ್ದಾರೆ.
ಮರಿಯಾ ರೋಡ್ರಿಗ್ಸ್ ರವರು ನವೆಂಬರ್ ತಿಂಗಳಲ್ಲಿ ಯೋಗ ಟ್ರೈನಿಂಗ್ ಪಡೆಯಲು ಸ್ಪೇನ್ ದೇಶದಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿದ್ದು ಇನ್ಫೋಸಿಸ್ ಬಳಿ ಮನೆ ಬಾಡಿಗೆ ಪಡೆದು ತಂಗಿದ್ದಾರೆ.ಜನವರಿ 26 ರಂದು ಗೋಕುಲಂ ನಿಂದ ತಮ್ಮ ಮನೆಗೆ ತೆರಳಲು ಮರಿಯಾ ರೋಡ್ರಿಗ್ಸ್ ರವರು ಊಬರ್ ಆಟೋ ಬುಕ್ ಮಾಡಿದ್ದಾರೆ.KA09 -B 6216. ನೊಂದಣಿ ಸಂಖ್ಯೆಯ ಆಟೋ ಚಾಲಕ ರಂಜನ್ ವಿದೇಶಿ ಮಹಿಳೆಯನ್ನ ತನ್ನ ಆಟೋದಲ್ಲಿ ಕರೆದೊಯ್ಯುವಾಗ ಇನ್ಫೋಸಿಸ್ ಬಳಿ ಸೆಲ್ಫೀ ತೆಗೆಯಲು ಪ್ರಯತ್ನಿಸಿದ್ದಾನೆ.ಈ ಪ್ರಯತ್ನವನ್ನ ಮರಿಯಾ ರೋಡ್ರಿಗ್ಸ್ ವಿರೋಧಿಸಿದ್ದಾರೆ.ನಂತರ ಆಟೋದಿಂದ ಇಳಿದ ರಂಜನ್ ವಿದೇಶಿ ಮಹಿಳೆಯನ್ನ ಹೊರಕ್ಕೆ ಎಳೆಯುವ ಪ್ರಯತ್ನ ಮಾಡಿ ನಂತರ ತಾನೇ ಆಕೆಯ ಪಕ್ಕದಲ್ಲಿ ಕುಳಿತು ಬುಜಗಳ ಮೇಲೆ ಕೈ ಹಾಕಿ ಬಕವಂತವಾಗಿ ಸೆಲ್ಪೀ ತೆಗೆದಿದ್ದಾನೆ.ಈ ವೇಳೆ ಆಕೆಗೆ ಮುತ್ತು ಕೊಡುವ ಪ್ರಯತ್ನ ಮಾಡಿ ವಿರೋಧಿಸುತ್ತಿದ್ದರೂ ಬಿಡದೆ ಬಕವಂತವಾಗಿ ಸೆಲ್ಪೀ ತೆಗೆದುಕೊಂಡಿದ್ದಾನೆ.ಇವೆಲ್ಲಾ ಬೆಳವಣಿಗೆ ನಂತರ ಫೋನ್ ಆಕೆಗೆ ಫೋನ್ ನಂಬರ್ ನೀಡಿ ಮಸಾಜ್ ಬೇಕಿದ್ದಲ್ಲಿ ಕರೆಯಿರಿ ಎಂದು ಅಸಭ್ಯವಾಗಿ ಮಾತನಾಡಿದ್ದಾನೆ.ರಂಜನ್ ಕಪಿಮುಷ್ಠಿಯಿಂದ ಬಿಡಿಸಿಕೊಂಡ ಮರಿಯಾ ರೋಡ್ರಿಗ್ಸ್ ಊಬರ್ ಕಂಪನಿಗೆ ದೂರು ನೀಡಿ ನಂತರ ಹೆಬ್ಬಾಳ್ ಠಾಣೆಗೆ ಬಂದು ರಂಜನ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ವಿದೇಶಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ರಂಜನ್ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…