ನಕಲಿ ದಾಖಲೆ ಸೃಷ್ಟಿಸಿ ಐಸಿಐಸಿಐ ಬ್ಯಾಂಕ್ ಗೆ ಧೋಖಾ…ನಾಲ್ವರು ಮಧ್ಯವರ್ತಿಗಳು ಸೇರಿದಂತೆ ಇತರರ ಮೇಲೆ FIR ದಾಖಲು…1.09 ಕೋಟಿ ವಂಚನೆ…

ನಕಲಿ ದಾಖಲೆ ಸೃಷ್ಟಿಸಿ ಐಸಿಐಸಿಐ ಬ್ಯಾಂಕ್ ಗೆ ಧೋಖಾ…ನಾಲ್ವರು ಮಧ್ಯವರ್ತಿಗಳು ಸೇರಿದಂತೆ ಇತರರ ಮೇಲೆ FIR ದಾಖಲು…1.09 ಕೋಟಿ ವಂಚನೆ…

ಮೈಸೂರು,ಫೆ1,Tv10 ಕನ್ನಡ

ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ಗೆ ವಂಚನೆ ಎಸಗಿದ ಆರೋಪದ ಮೇಲೆ ನಾಲ್ವರು ಮಧ್ಯವರ್ತಿಗಳು ಸೇರಿದಂತೆ ಹಲವರ ಮೇಲೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಧ್ಯವರ್ತಿಗಳಾದ ಸುಶೀಲ್ ಕುಮಾರ್,ವರದರಾಜನ್,ಪುಟ್ಟಸ್ವಾಮಿ ಬ್ಯಾಂಕ್ ನ ಹೊರಗುತ್ತಿಗೆ ನೌಕರ ನಿಮಿಷ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.ಬ್ಯಾಂಕ್ ವ್ಯವಸ್ಥಾಪಕರಾದ ಏಕಾಂತ್ ಪ್ರಕರಣ ದಾಖಲಿಸಿದ್ದಾರೆ.

ಗೀತಾ ಎಂಬುವರು ಜಯಲಕ್ಷ್ಮಿಪುರಂ ಸ್ವತ್ತು ನಂ 23 ಮೇಲೆ ಲ್ಯಾಂಡ್ ಲೋನ್ ಅಪೇಕ್ಷಿಸಿ 1-07-2021 ರಂದು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಬ್ಯಾಂಕ್ ಸಿಬ್ಬಂದಿಗಳು ವಕೀಲರ ಬಳಿ ಲೀಗಲ್ ಸಲಹೆ ಪಡೆದು ವಾಲ್ಯುಏಷನ್ ರಿಪೋರ್ಟ್ ಆಧಾರದ ಮೇಲೆ 1,65,00,000/- ಸಾಲ ನೀಡಿದ್ದಾರೆ.ಮೈಸೂರು ದಕ್ಷಿಣ ಉಪನೊಂದಣಾಧಿಕಾರಿ ಕಚೇರಿಯಲ್ಲಿ 1 ನೇ ಪುಸ್ತಕ ನಂ1 Mys-1-01451-2021-22 ರಲ್ಲಿ ನೊಂದಣಿ ಆಗಿದೆ.ಬ್ಯಾಂಕ್ ನ ಹೊರಗುತ್ತಿಗೆ ನೌಕರ ನಿಮಿಷ್ ರವರು ಸ್ವತ್ತಿನ ಮಾರಾಟಗಾರರಾದ ಪುಟ್ಟರಾಜು ರವರಿಗೆ ಚೆಕ್ ನೀಡಿ ದಾಖಲೆಗಳನ್ನ ಪಡೆದಿದ್ದಾರೆ.ಆಗಸ್ಟ್ 23 ರ ವರೆಗೆ ಗೀತಾ ರವರು ಸಾಲದ ಕಂತು ಕಟ್ಟಿ ನಂತರ ಸ್ಥಗಿತಗೊಳಿಸಿದ್ದಾರೆ.ಬ್ಯಾಂಕ್ ಸಿಬ್ಬಂದಿಗಳು ಸಾಲ ಮರುಪಾವತಿಸುವಂತೆ ತಿಳಿಸಿದಾಗ ತಾವು ಮೋಸ ಹೋಗಿರುವುದಾಗಿ ಗೀತಾ ತಿಳಿಸಿದ್ದಾರೆ.ಬ್ಯಾಂಕ್ ನವರು ಪರಿಶೀಲನೆ ಮಾಡಿದಾಗ ನೊಂದಣಿ ಆದ ದಾಖಲೆಯಲ್ಲಿ ಸದರಿ ಪುಸ್ತಕದಲ್ಲಿ ಶ್ವೇತಾ ಮೋಹನ್ ಕುಟ್ಟಂಡ ಹೆಸರಿನಲ್ಲಿ ಸ್ವತ್ತು ನೊಂದಣಿ ಆಗಿರುವುದು ಕಂಡುಬಂದಿದೆ.ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದಾಗ ಮಧ್ಯವರ್ತಿಗಳಾದ ಸುಶೀಲ್ ಕುಮಾರ್ ನಕಲಿ ದಾಖಲೆಗಳನ್ನ ಸೃಷ್ಟಿಸಿ ಯಾಮಾರಿಸಿರುವುದು ಬೆಳಕಿಗೆ ಬಂದಿದೆ.ಪುಟ್ಟರಾಜು ರವರು ಚೆಕ್ ಪಡೆದು ವರದರಾಜನ್,ವಿಕಾಸಿನಿ ಸೇರದಂತೆ ಹಲವರ ಹೆಸರಲ್ಲಿ ಹಣ ಡ್ರಾ ಮಾಡಿರುವುದು ಕಂಡು ಬಂದಿದೆ.ಇದೀಗ ಗೀತಾ ರವರು ಬ್ಯಾಂಕ್ ಗೆ ಅಸಲು 97,70,391/- ಜೊತೆಗೆ ಬಡ್ಡಿ ಸೇರಿ 1,09,10,780/- ರೂ ಬಾಕಿ ಉಳಿಸಿಕೊಂಡಿದ್ದಾರೆ.ಗೀತಾ ರವರಿಂದ ಹಣ ಮರುಪಾವತಿ ಆಗದ ಹಿನ್ನಲೆ ಬ್ಯಾಂಕ್ ಮ್ಯಾನೇಜರ್ ಏಕಾಂತ್ ಮಧ್ಯವರ್ತಿಗಳ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *