
ಶೇರ್ ಟ್ರೇಡಿಂಗ್ ನಲ್ಲಿ 25% ಲಾಭದ ಆಮಿಷ…37.53 ಲಕ್ಷಕ್ಕೆ ಉಂಡೆನಾಮ…
- TV10 Kannada Exclusive
- February 1, 2025
- No Comment
- 88
ಮೈಸೂರು,ಫೆ1,Tv10 ಕನ್ನಡ
ಶೇರ್ ಟ್ರೇಡಿಂಗ್ ನಲ್ಲಿ 5 ರಿಂದ 25 % ಲಾಭ ಬರುತ್ತದೆಂದು ನಂಬಿಸಿದ ವಂಚಕರು ಮೈಸೂರಿನ ವೃದ್ದರೊಬ್ಬರಿಗೆ 37.53 ಲಕ್ಷಕ್ಕೆ ಉಂಡೆನಾಮ ಹಾಕಿದ್ದಾರೆ.ಕುವೆಂಪುನಗರದ ನಿವಾಸಿ ಶ್ರೀಕಾಂತ ಸ್ವಾಮಿ (63) ಹಣ ಕಳೆದುಕೊಂಡವರು.ಆಪ್ ಡೌನ್ ಲೋಡ್ ಮಾಡಿಕೊಂಡು ಶೇರು ವ್ಯವಹಾರ ನಡೆಸಿದರೆ 25 % ವರೆಗೆ ಲಾಭ ಸಿಗುವುದಾಗಿ ಆಮಿಷವೊಡ್ಡಿದ್ದಾರೆ.ವಂಚಕರ ಮಾತು ನಂಬಿ ಶ್ರೀಕಾಂತಸ್ವಾಮಿ ಹಂತಹಂತವಾಗಿ 37.53 ಲಕ್ಷ ಹಣ ಹೂಡಿದ್ದಾರೆ.ನಂತರ ತಾವು ಮೋಸ ಹೋಗಿರುವುದು ಖಚಿತವಾಗಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…