
ಸ್ನೇಹಿತನಿಗೆ ಕೊಡಿಸಿದ ಸಾಲ ತಂದ ಆಪತ್ತು…ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ…
- TV10 Kannada Exclusive
- February 2, 2025
- No Comment
- 76
ನಂಜನಗೂಡು,ಫೆ2,Tv10 ಕನ್ನಡ
ಸ್ನೇಹಿತನಿಗೆ ಖಾಸಗಿ ಬ್ಯಾಂಕ್ ನಲ್ಲಿ ಕೊಡಿಸಿದ ಸಾಲ ವ್ಯಕ್ತಿಗೆ ಮುಳುವಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ತಾಲೂಕು ದಂಡೀಕೆರೆ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ತಾಲೂಕು ಮಲ್ಲೂಪುರ ಗ್ರಾಮದ ಸಿದ್ದೇಶ್(40) ಮೃತ ದುರ್ದೈವಿ. ಸೆಲ್ಫಿ ವಿಡಿಯೋ ಮಾಡಿರುವ ಸಿದ್ದೇಶ್ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿ
ಪತ್ನಿ ಮಕ್ಕಳು ತಂದೆ ತಾಯಿ ಸಹೋದರನಿಗೆ ಕ್ಷಮೆಯಾಚಿಸಿದ್ದಾರೆ.
ಸಿದ್ದೇಶ್ ತನ್ನ ಹೆಸರಲ್ಲಿ ಸ್ನೇಹಿತನಿಗೆ ಖಾಸಗಿ ಬ್ಯಾಂಕ್ ನಲ್ಲಿ ಕಾರು ಖರೀದಿಸಲು ಸಾಲ ಕೊಡಿಸಿದ್ದಾರೆ.ಜೊತೆಗೆ ಪರಿಚಯದವರಿಂದ 2 ಲಕ್ಷ ಕೈ ಸಾಲವನ್ನೂ ಸಹ ಕೊಡಿಸಿದ್ದಾರೆ.ಸ್ನೇಹಿತ ಮಣಿಕಂಠ ಸಾಲ ತೀರಿಸುವಲ್ಲಿ ವಿಫಲವಾಗಿದ್ದಾನೆ.ಬ್ಯಾಂಕ್ ಸಿಬ್ಬಂದಿಗಳು ಸಾಲ ತೀರಿಸುವಂತೆ ಸಿದ್ದೇಶ್ ಮೇಲೆ ಒತ್ತಡ ಹೇರಿದ್ದಾರೆ.ಇದರಿಂದ
ಮನನೊಂದ ಸಿದ್ದೇಶ್
ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ತಮಗಾದ ನೋವನ್ನ ಸಿದ್ದೇಶ್ ಸಾವಿಗೂ ಮುನ್ನ ಸೆಲ್ಪೀ ವಿಡಿಯೋ ಮಾಡಿದ್ದಾರೆ.
ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…