
ಕೇಂದ್ರ ಸರ್ಕಾರದ ಬಜೆಟ್ ವಿರುದ್ದ ಆಕ್ರೋಷ…ಮೈಸೂರು ಕನ್ನಡ ವೇದಿಕೆ ವತಿಯಿಂದ ತೆಂಗಿನ ಚಿಪ್ಪು ಹಿಡಿದು ಪ್ರತಿಭಟನೆ
- TV10 Kannada Exclusive
- February 4, 2025
- No Comment
- 86
…
ಮೈಸೂರು,ಫೆ4,Tv10 ಕನ್ನಡ
ಉತ್ತರ ಭಾರತಕ್ಕೆ ಬೆಣ್ಣೆ ದಕ್ಷಿಣ ಭಾರತದ ಬಿಜೆಪಿ ಹೆಚ್ಚಾಗಿರುವ ಕರ್ನಾಟಕಕ್ಕೆ ಸುಣ್ಣ ಕೈಗೆ ಚಿಪ್ಪು ನೀಡಿರುವ ಕೇಂದ್ರ ಬಜೆಟಿನ ವಿರುದ್ಧ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಬಿಜೆಪಿ ಆಗಲಿ ಕಾಂಗ್ರೆಸ್ ಆಗಲಿ ನಿರಂತರವಾಗಿ ಸಾಕಷ್ಟು ಸಂಸದರು ಗೆಲ್ಲಿಸಿ, ಕೇಂದ್ರ ಸರ್ಕಾರದ ರಚನೆಗೆ ಸಹಕಾರ ನೀಡುತ್ತಿರುವ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿರುವುದು ದುರಂತ ಎಂದು ಆಕ್ರೋಷ ವ್ಯಕ್ತಪಡಿಸಿದರು. ಆಂಧ್ರಪ್ರದೇಶದ ವಿಶಾಖಪಟ್ಟಣ ಉಪ್ಪು ಕಾರ್ಖಾನೆಯನ್ನು ಪುನಶ್ಚೇತನ ಗೊಳಿಸಲು ಕೇಂದ್ರ ಸರ್ಕಾರ 11,000 ಕೋಟಿ ಬಿಡುಗಡೆ ಮಾಡಿದೆ ಆದರೆ ಕರ್ನಾಟಕದಲ್ಲಿರುವ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಗೆ ಕವಡೆ ಕಾಸು ನೀಡಲಿಲ್ಲ ಇದರ ಬಗ್ಗೆ ನಮ್ಮ ಸಚಿವರು ಮಾತಾಡಲಿಲ್ಲ ಎಂದು ಟೀಕಿಸಿದರು.ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ರವರು ಎಂಟು ಬಾರಿ ಬಜೆಟ್ ಅನ್ನು ಮಂಡಿಸಿದರೂ ಸಹ ರಾಜ್ಯದ ಬಾಯಾರಿಕೆ ತೀರಿಸುವಂತಹ ರೈತರ ಸಮಸ್ಯೆಯನ್ನು ಬಗೆಹರಿಸುವಂತಹ ಮಹದಾಯಿ ಯೋಜನೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ, ಬೃಹತ್ ಕೈಗಾರಿಕೆಗಳು ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸದೆ ಇರುವುದು ಕನ್ನಡ ನಾಡಿನ ವಿರೋಧಿ ನೀತಿಯನ್ನು ಎತ್ತು ತೋರುತ್ತಿದೆ. ಇನ್ನಾದರೂ ಎಚ್ಚೆತ್ತು ಪಕ್ಷಾತೀತವಾಗಿ ಸಂಸದರು ಧ್ವನಿಯನ್ನು ಎತ್ತುವ ಮೂಲಕ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸಬೇಕೆಂದು ವೇದಿಕೆ ಆಗ್ರಹಿಸುತ್ತದೆ.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷರಾದ ಎಸ್ ಬಾಲಕೃಷ್ಣ, ಪದಾಧಿಕಾರಿಗಳಾದ ನಾಲ ಬೀದಿರವಿ, ಗುರುಬಸಪ್ಪ, ಗೋಪಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಸಿದ್ದಪ್ಪ ಎಲ್ಐಸಿ, ಗೋವಿಂದ್ ರಾಜ್, ಸ್ವಾಮಿ, ಬೀಡಾ ಬಾಬು, ಮನೋಹರ್, ಹರೀಶ್, ಮಾದಪ್ಪ, ಅರವಿಂದ, ಮದನ್, ಸ್ವಾಮಿ ಗೈಡ್, ಚಿನ್ನಪ್ಪ, ಸುನಿಲ್, ಶಿವು ಮುಂತಾದವರು ಭಾಗವಹಿಸಿದ್ದರು…