
ನಾಲೆ ನೀರು ಹರಿಯಲು ಬಿಡದ ತ್ಯಾಜ್ಯ…ಅಧಿಕಾರಿಗಳನ್ನ ನಾಚಿಸುತ್ತಿರುವ ರಾಶಿ ರಾಶಿ ಮಧ್ಯದ ಪ್ಯಾಕೆಟ್ ಗಳು…ಧಾರ್ಮಿಕ ಪುಣ್ಯಕ್ಷೇತ್ರದಲ್ಲಿ ಇದೆಂತಹ ದುರ್ವ್ಯವಸ್ಥೆ
- TV10 Kannada Exclusive
- February 4, 2025
- No Comment
- 181



…
ನಂಜನಗೂಡು,ಫೆ4,Tv10 ಕನ್ನಡ

ದಕ್ಷಿಣಕಾಶಿ ನಂಜನಗೂಡು ಧಾರ್ಮಿಕ ಪುಣ್ಯಕ್ಷೇತ್ರವೆಂದೇ ಪ್ರಖ್ಯಾತಿ ಹೊಂದಿದೆ.ಇಲ್ಲಿಗೆ ಬರುವ ಭಕ್ತರು ಕಪಿಲೆಯಲ್ಲಿ ಮಿಂದು ಪಾಪ ಕಳೆಯಲು ಬರುತ್ತಾರೆ.ಆದ್ರೆ ಕಪಿಲೆಯ ಒಡಲಲ್ಲಿ ಸೇರುತ್ತಿರುವ ತ್ಯಾಜ್ಯ ಭಕ್ತರನ್ನ ಮಲಿನಗೊಳಿಸುತ್ತಿದೆ.ತ್ಯಾಜ್ಯದ ಜೊತೆಗೆ ಮಧ್ಯದ ಖಾಲಿ ಪ್ಯಾಕೆಟ್ ಗಳು ಸಹ ಭಕ್ತರನ್ನ ಪಾವನಗೊಳಿಸುತ್ತಿದೆ…!
ಹೌದು…ಇದು ನಂಜನಗೂಡಿನ ನಗರಸಭೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ದಿವ್ಯನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆ.ನಂಜನಗೂಡು ಸರ್ಕಾರಿ ಬಸ್ ನಿಲ್ದಾಣದ ಕೆನರಾ ಬ್ಯಾಂಕ್ ಸಮೀಪದಲ್ಲಿ ನುಗುನಾಲೆ ಹರಿಯುತ್ತಿದೆ.ಈ ನಾಲೆ ನೀರು ಗುಂಡ್ಲಾನದಿ ಸೇರಿ ನಂತರ ಕಪಿಲೆಯನ್ನ ಬೆರೆಯುತ್ತದೆ.ಆದ್ರೆ ವಿಷಾದದ ಸಂಗತಿ ಅಂದ್ರೆ ನಾಲೆಗೆ ತ್ಯಾಜ್ಯದ ರಾಶಿ ಸುರಿಯಲಾಗುತ್ತಿದೆ.ಮಧ್ಯದ ಪ್ಯಾಕೆಟ್ ಗಳು,ಕಸ,ಕೋಳಿ ರೆಕ್ಕೆಪುಕ್ಕಗಳು ನಾಲೆ ನೀರು ಸೇರುತ್ತಿದೆ.ಕಸದರಾಶಿ ನೀರನ್ನ ಸರಾಗವಾಗಿ ಹರಿಯಲು ಬಿಡದೆ ತಡೆಹಿಡಿಯುತ್ತಿದೆ.ಕಸದರಾಶಿಯಿಂದ ನುಸುಳಿ ಮಲಿನವಾಗಿ ಹೋಗುತ್ತಿರುವ ನೀರು ಗುಂಡ್ಲಾನದಿ ಮೂಲಕ ಕಪಿಲೆ ಒಡಲು ಸೇರುತ್ತಿದೆ.ಇದೇ ಮಲಿನ ನೀರಿನಲ್ಲಿ ಮಿಂದೇಳುವ ಭಕ್ತರು ಪಾಪಗಳನ್ನ ತೊಳೆದುಕೊಳ್ಳಲು ಮುಂದಾಗಿದ್ದಾರೆ.ಭಕ್ತರ ಆರೋಗ್ಯದ ಜೊತೆ ನಗರಸಭೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ.ಬಾರ್ ಅಂಡ್ ರೆಸ್ಟೋರೆಂಟ್ ಗಳಿಂದ ಬರುತ್ತಿರುವ ಖಾಲಿ ಮಧ್ಯದ ಪ್ಯಾಕೆಟ್ ಗಳಿಗೆ ನಾಲೆ ಆವಾಸ ಸ್ಥಾನವಾಗಿ ಪರಿಣಮಿಸಿದೆ.ಅಬಕಾರಿ ಇಲಾಖೆ ಅಧಿಕಾರಿಗಳಂತೂ ಇದ್ಯಾವುದರ ಪರಿವೆ ಇಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ.ಬೇಸಿಗೆ ಸನಿಹವಾಗುವ ಸಮಯ.ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಭಕ್ತರ ಒಳಿತಿಗಾಗಿ ಸ್ವಚ್ಛತೆ ಕಾಪಾಡಬೇಕಿದೆ…