
Tv10 ಇಂಪ್ಯಾಕ್ಟ್…ತ್ಯಾಜ್ಯಮುಕ್ತವಾದ ನುಗುನಾಲೆ…ಕೊನೆಗೂ ಎಚ್ಚೆತ್ತ ಅಧಿಕಾರಿಗಳು…
- TV10 Kannada Exclusive
- February 5, 2025
- No Comment
- 122





ನಂಜನಗೂಡು,ಫೆ5,Tv10 ಕನ್ನಡ
ಕೊನೆಗೂ ನಂಜನಗೂಡು ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.ತ್ಯಾಜ್ಯ ಹಾಗೂ ಮಧ್ಯದ ಪ್ಯಾಕೆಟ್ ಗಳಿಂದ ತುಂಬಿತುಳುಕುತ್ತಿದ್ದ ನುಗು ನಾಲೆಯನ್ನ ಸ್ವಚ್ಛಗೊಳಿಸಿದ್ದಾರೆ.Tv10 ಕನ್ನಡ ಮಾಡಿದ ವರದಿಗೆ ಸ್ಪಂದಿಸಿದ ಅಧಿಕಾರಿಗಳು ನುಗುನಾಲೆಯನ್ನ ಸ್ವಚ್ಛಗೊಳಿಸಿದ್ದಾರೆ.
ನಂಜನಗೂಡಿನ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ನುಗುನಾಲೆಗೆ ಕಸದ ರಾಶಿ ಸೇರುತ್ತಿದೆ.ಇದರ ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಗಳ ಖಾಲಿ ಮಧ್ಯದ ಪ್ಯಾಕೆಟ್ ಗಳು ಸೇರಿ ನುಗುನಾಲೆಯನ್ನ ಮಲಿನ ಮಾಡುತ್ತಿವೆ.ಇದೇ ನಾಲೆ ನೀರು ಗುಂಡ್ಲಾನದಿ ಮೂಲಕ ಕಪಿಲೆಗೆ ಸೇರುತ್ತದೆ.ಮಲಿನ ಕಪಿಲೆಯಲ್ಲಿ ಮಿಂದೇಳುವ ಭಕ್ತರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ Tv10 ಕನ್ನಡ ವಾಹಿನಿಯಲ್ಲಿ ನಿನ್ನೆ ಸುದ್ದಿ ಮಾಡಲಾಗಿತ್ತು.ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕೇವಲ 24 ಗಂಟೆಯಲ್ಲಿ ನುಗುನಾಲೆಯ ಸ್ವಚ್ಛತೆಗೆ ಮುಂದಾಗಿದ್ದಾರೆ.ಜೆಸಿಬಿ ಯಂತ್ರದ ಮೂಲಕ ಸ್ವಚ್ಛತಾ ಕಾರ್ಯ ನೆರವೇರುತ್ತಿದೆ.ಇದು Tv10 ಕನ್ನಡ ವರದಿಯ ಫಲಶೃತಿಯಾಗಿದೆ…