ವಿಜಯನಗರ ಪೊಲೀಸರ ಕಾರ್ಯಾಚರಣೆ…ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 8 ಮಂದಿ ಬಂಧನ…ಓರ್ವ ರೌಡಿಶೀಟರ್…

ವಿಜಯನಗರ ಪೊಲೀಸರ ಕಾರ್ಯಾಚರಣೆ…ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 8 ಮಂದಿ ಬಂಧನ…ಓರ್ವ ರೌಡಿಶೀಟರ್…

ಮೈಸೂರು,ಫೆ5,Tv10 ಕನ್ನಡ

ಸ್ನೇಹಿತನ ತಂಗಿ ಬಗ್ಗೆ ಅಪಪ್ರಚಾರ ಮಾಡಿದ್ದ ಹಿನ್ನಲೆ ಬುದ್ದಿ ಹೇಳಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 8 ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.8 ಮಂದಿ ಆರೋಪಿಗಳ ಪೈಕಿ ಓರ್ವ ರೌಡಿ ಶೀಟರ್ ಆಗಿದ್ದು ಗಡೀಪಾರ್ ಆಗಿದ್ದ.ಎರಡು ದಿನಗಳ ಹಿಂದಷ್ಟೆ ಗಡೀಪಾರ್ ಶಿಕ್ಷೆ ಮುಗಿಸಿ ಬಂದು ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.

ಆದರ್ಶ್ ಹಲ್ಲೆಗೆ ಒಳಗಾದ ಯುವಕ.ಕಳ್ಳ ಶಿವು@ ಶಿವಕುಮಾರ್,ಪ್ರಜ್ವಲ್ @ ಸ್ಪಾಟ್,ಧನರಾಜ್@ ಮನು,ಹೃಷಿತ್@ಕುಳ್ಳಿ,ಖಜಾನೆ,ಶರತ್,ಹಾಲುಮಂಜ ಹಾಗೂ ಪವನ್@ಪಮ್ಮಿ ಬಂಧಿತರು.

ನಾಲ್ಕು ತಿಂಗಳ ಹಿಂದೆ ಆದರ್ಶ್ ಸ್ನೇಹಿತ ಪ್ರಸಾದ್ ತಂಗಿಯ ಬಗ್ಗೆ ಪ್ರಜ್ವಲ್ @ಸ್ಪಾಟ್ ಅಪಪ್ರಚಾರ ಮಾಡಿದ್ದ.ಈ ಬಗ್ಗೆ ಬುದ್ದಿವಾದ ಹೇಳುವಂತೆ ಆದರ್ಶ್ ಗೆ ಪ್ರಸಾದ್ ಹೇಳಿಕೊಂಡಿದ್ದ.ಅದರಂತೆ ಪ್ರಜ್ವಲ್@ಸ್ಪಾಟ್ ಗೆ ನಾಲ್ಕು ತಿಂಗಳ ಹಿಂದೆ ಆದರ್ಶ್ ಬುದ್ದಿವಾದ ಹೇಳಿ ಬಂದಿದ್ದ.

ಇದನ್ನೇ ಧ್ವೇಷವಾಗಿ ಬೆಳೆಸಿಕೊಂಡ ಪ್ರಜ್ವಲ್ ಫೆ.3 ರಂದು ಹೂಟಗಳ್ಳಿಯ ಸಿಗ್ನಲ್ ಲೈಟ್ ಬಳಿ ರಾತ್ರಿ ತನ್ನ ಸ್ನೇಹಿತರ ಜೊತೆ ಮಾತನಾಡುತ್ತ ಕುಳಿತಿದ್ದಾಗ ಪ್ರಜ್ವಲ್,ಕಳ್ಳಶಿವು,ಧನರಾಜ್ ಸೇರಿದಂತೆ 8 ಮಂದಿ ಬಂದು ಹಲ್ಲೆಗೆ ಯತ್ನಿಸಿದ್ದಾರೆ.ನಮ್ಮ ಬಾಸ್ ಇಲ್ಲದ ಸಮಯದಲ್ಲಿ ಆವಾಜ್ ಹಾಕ್ತೀಯ ಅಂತ ಬೆದರಿಕೆ ಹಾಕಿದ್ದಾರೆ.ಈ ಹಿಂದೆ ಕಳ್ಳ ಶಿವು @ ಶಿವಕುಮಾರ್ ಮೇಲೆ ರೌಡಿ ಶೀಟರ್ ತೆರೆಯಲಾಗಿದ್ದು ಮೈಸೂರು ಪೊಲೀಸರು ಗಡೀಪಾರು ಶಿಕ್ಷೆ ವಿಧಿಸಿ ಮಂಗಳೂರಿಗೆ ರವಾನೆ ಮಾಡಿದ್ದರು.ಕಳ್ಳಶಿವು ಇಲ್ಲದಿರುವಾಗ ಪ್ರಜ್ವಲ್ ಗೆ ಆದರ್ಶ್ ನಾಲ್ಕು ತಿಂಗಳ ಹಿಂದೆ ಬುದ್ದಿವಾದ ಹೇಳಿದ್ದ.8 ಮಂದಿಗೆ ಬಾಸ್ ಆಗಿದ್ದವನು ಕಳ್ಳಶಿವು.ಬಾಸ್ ಇಲ್ಲದಿದ್ದಾಗ ಆವಾಜ್ ಹಾಕಿದ್ದೀಯ ಎಂದು ಹೇಳಿ ದರ್ಶನ್ ಮೇಲೆ ಹಲ್ಲೆ ನಡೆಸಿದ್ದಾರೆ.ಈ ವೇಳೆ ಜೊತೆ ಇದ್ದ ದರ್ಶನ್ ಸ್ನೇಹಿತರು 8 ಮಂದಿಯ ಗುಂಪು ನೋಡಿ ಓಡಿಹೋಗಿದ್ದಾರೆ.ತಪ್ಪಿಸಿಕೊಂಡು ಹೋಗುವ ಪ್ರಯತ್ನ ನಡೆಸಿದ ದರ್ಶನ್ ನ ಹಿಡಿದು ಬೈಕ್ ನಲ್ಲಿ ಹತ್ತಿಸಿಕೊಂಡು ಮತ್ತೊಂದು ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ.ಈ ವೇಳೆ ಶರತ್ ಬಿಯರ್ ಬಾಟಲಿನಿಂದ ದರ್ಶನ್ ತಲೆಗೆ ಹೊಡೆದಿದ್ದಾನೆ.ದರ್ಶನ್ ಮೇಲೆ ನಡೆದ ಅಟ್ಯಾಕ್ ಸುದ್ದಿ ಕೇಳಿ ಸ್ನೇಹಿತರ ಗುಂಪು ಬಂದಿದೆ.ಗಾಯಗೊಂಡಿದ್ದ ದರ್ಶನ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಮಂಗಳೂರಿನಿಂದ ಎರಡು ದಿನಗಳ ಹಿಂದಷ್ಟೇ ಮೈಸೂರಿಗೆ ಬಂದ ಕಳ್ಳ ಶಿವು ತನ್ನ ಗ್ಯಾಂಗ್ ಕಟ್ಟಿಕೊಂಡು ದರ್ಶನ್ ಮೇಲೆ ಅಟ್ಯಾಕ್ ಮಾಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ದರ್ಶನ್ ಮೇಲೆ ಹಲ್ಲೆ ನಡೆಸಿದ 8 ಮಂದಿ ಆರೋಪಿಗಳನ್ನ ಕೃತ್ಯ ನಡೆದ ಕೇವಲ 24 ಗಂಟೆ ಒಳಗೆ ವಿಜಯನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *