ಮೈಸೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ… 2.06 ಕೋಟಿ ಮೌಲ್ಯದ ಮಾಲುಗಳು ವಶ…

ಮೈಸೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ… 2.06 ಕೋಟಿ ಮೌಲ್ಯದ ಮಾಲುಗಳು ವಶ…

ಮೈಸೂರು,ಫೆ6,Tv10 ಕನ್ನಡ

ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿರುವ ಸ್ವತ್ತುಗಳನ್ನು ಹಿಂತಿರುಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೈಸೂರು ಜಿಲ್ಲೆಯಾದ್ಯಂತ ಕಳ್ಳತನವಾಗಿದ್ದ ಸ್ವತ್ತುಗಳನ್ನು ಪತ್ತೆ ಮಾಡಿ ಮಾಲೀಕರು, ವಾರಸುದಾರರಿಗೆ ನೀಡಲಾಯಿತು.
ಮೈಸೂರಿನ ಜ್ಯೋತಿನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು.
06 ಸುಲಿಗೆ, 06 ಸರಗಳ್ಳತನ, 25 ಮನೆ ಕಳ್ಳತನ, 6 ಸರ್ವೆಂಟ್ ಕಳ್ಳತನ, 67 ವಾಹನ ಕಳ್ಳತನ, 15 ಸಾಮಾನ್ಯ ಕಳ್ಳತನ, 5 ಜಾನುವಾರು ಕಳ್ಳತನ, 4 ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು.
ಒಟ್ಟು 2,06,85,504 ಮೌಲ್ಯದ ಮಾಲುಗಳು ವಶಕ್ಕೆ ಪಡೆದಿದ್ದರು.
ಈ ಕುರಿತು ಮೈಸೂರು‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ. ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ.
ಒಟ್ಟು 35 ಪ್ರಕರಣಗಳಲ್ಲಿ 2 ಕೆಜಿ 439 ಗ್ರಾಂ, 600 ಮಿಲಿಗ್ರಾಂ ಚಿನ್ನ ಮತ್ತು 4 ಕೆಜಿ 360 ಗ್ರಾಂ ಬೆಳ್ಳಿಯ ಸಾಮಗ್ರಿಗಳು ವಶಪಡಿಸಿಕೊಳ್ಳಲಾಗಿದೆ. ಒಟ್ಟು 18 ಪ್ರಕರಣಗಳಲ್ಲಿ 42,36,585 ರೂಪಾಯಿವಶ ಪಡಿಸಿಕೊಳ್ಳಲಾಗಿದೆ. ಒಟ್ಟು 67 ಪ್ರಕರಣಗಳಲ್ಲಿ 05 ಕಾರು, 03 ಆಟೋ, 02 ಟ್ರಾಕ್ಟರ್, 03 ಟಿಪ್ಪರ್, 03 ರೋಡ್ ರೋಲರ್, 62 ಮೊಟಾರ್ ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು…

Spread the love

Related post

ನ್ಯಾಯಾಲಯವನ್ನೇ ಯಾಮಾರಿಸಿದ ಭೂಪರು…ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಬಳಸಿ ವಂಚನೆ…ಇಬ್ಬರ ವಿರುದ್ದ FIR ದಾಖಲು…

ನ್ಯಾಯಾಲಯವನ್ನೇ ಯಾಮಾರಿಸಿದ ಭೂಪರು…ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಬಳಸಿ…

ಮೈಸೂರು,ಮಾ12,Tv10 ಕನ್ನಡ ಜಾಮೀನು ನೀಡುವ ಸಮಯದಲ್ಲಿ ಒಂದೇ ಸ್ವತ್ತಿಗೆ ಬೇರೆ ಬೇರೆ ಆಧಾರ್ ಕಾರ್ಡ್ ಗಳನ್ನ ಸಲ್ಲಿಸಿ ನ್ಯಾಯಾಲಯವನ್ನೇ ಯಾಮಾರಿಸಿದ ಇಬ್ಬರ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ…
ಡೆವಿಲ್ ಸಿನಿಮಾ ಚಿತ್ರೀಕರಣ…ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರ…ನಾಡದೇವಿ ದರುಶನ ಪಡೆದ ಡಚ್ಚು…

ಡೆವಿಲ್ ಸಿನಿಮಾ ಚಿತ್ರೀಕರಣ…ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರ…ನಾಡದೇವಿ ದರುಶನ ಪಡೆದ…

ಮೈಸೂರು,ಮಾ12,Tv10 ಕನ್ನಡ ಇಂದಿನಿಂದ ಮೈಸೂರಿನಲ್ಲಿ ಮತ್ತೆ ದರ್ಶನ್ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.ಮೈಸೂರಿನ ನಜರಬಾದ್ ನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಚಿತ್ರೀಕರಣ ಆರಂಭವಾಗಿದೆ.ಡೆವಿಲ್ ಚಿತ್ರದ ಶೂಟಿಂಗ್ ಗಾಗಿ ಡಿ ಬಾಸ್…
ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೈಸೂರು,ಮಾ11,Tv10 ಕನ್ನಡ ಸುಡು ಬೇಸಿಗೆಯ ಉಷ್ಣಾಂಶದಲ್ಲಿ ಜೀವಸಂಕುಲಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮೂಕಸ್ಪಂದನೆ ಎಂಬ ಜಾಗೃತಿ ಅಭಿಯಾನಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಕೈ…

Leave a Reply

Your email address will not be published. Required fields are marked *