
ಪ್ರೇಮಿಗಳ ದಿನಾಚರಣೆಯಂದು ಪೋಷಕರಿಗೆ ಪಾದಪೂಜೆ ನೆರವೇರಿಸಿದ ಮಕ್ಕಳು…ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ…
- TV10 Kannada Exclusive
- February 15, 2025
- No Comment
- 129

ಮೈಸೂರು,ಫೆ15,Tv10 ಕನ್ನಡ

ಫೆಬ್ರವರಿ 14 ಪ್ರೇಮಿಗಳಿಗಾಗಿ ಮೀಸಲಾದ ದಿನ.ಯುವಜೋಡಿಗಳು ಸಂತಸದಿಂದ ಪ್ರೇಮಿಗಳ ದಿನಾಚರಣೆಯನ್ನ ಆಚರಿಸುತ್ತಿದ್ದರೆ ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ವಿಧ್ಯಾರ್ಥಿಗಳಿಂದ ಪೋಷಕರಿಗೆ ಪಾದಪೂಜೆ ಸಲ್ಲಿಸುವ ಮೂಲಕ
ಉತ್ತಮ ಬಾಂಧವ್ಯ ಬೆಳೆಸುವ ದಿವಾಗಿ ಪರಿಗಣಿಸಿ ಆಚರಿಸಲಾಗಿದೆ. ಹಿಂದುತ್ವದ ಸಂಸ್ಕಾರ ಸಂಸ್ಕೃತಿ ಹಿರಿಯರನ್ನು ಪ್ರೀತಿಸೋಣ ಎನ್ನುವ ಘೋಷ ವಾಕ್ಯದೊಂದಿಗೆ
ಪೋಷಕರ ಪಾದ ತೊಳೆದು ಕುಂಕುಮ ಅರಿಶಿಣ ಹಾಗೂ ಆರತಿ ಮಾಡುವ ಮೂಲಕ ಮಕ್ಕಳು ಕಣ್ಣಿಗೆ ಕಾಣುವ ದೇವರಿಂದ ಆಶೀರ್ವಾದ ಪಡೆದು ವಿಭಿನ್ನವಾಗಿ ಆಚರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ತೇಜಸ್ ಶಂಕರ್, ರಾಘವೇಂದ್ರ, ರೇಖಾ ಶ್ರೀನಿವಾಸ್, ಖುಷಿ,ಸವಿತಾ ಘಾಟ್ಕೆ, ಜಯಶ್ರೀ ಶಿವರಾಂ, ಅಪೂರ್ವ ಸುರೇಶ್,
ಜೇತ್ತಿ ಪ್ರಸಾದ್,
ಅನಿತಾ, ಶೈಲಜಾ, ಪ್ರಿಯಾಂಕ , ಅಂಕಿತ, ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು…