
ಆನೆ ಕಂದಕ,ರೈಲ್ವೆ ಕಂಬಿ ನಿರ್ಮಾಣ ಕಾರ್ಯಕ್ಕೆ ಶಾಸಕ ದರ್ಶನ್ ಧೃವನಾರಾಯಣ್ ಚಾಲನೆ…11.70 ಕೋಟಿ ವೆಚ್ಚದಲ್ಲಿ ನಿರ್ಮಾಣ…ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಬೀಳಲಿದೆ ಬ್ರೇಕ್…
- TV10 Kannada Exclusive
- February 16, 2025
- No Comment
- 32

ನಂಜನಗೂಡು,ಫೆ16,Tv10 ಕನ್ನಡ

ನಂಜನಗೂಡು ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಗಡಿಭಾಗಗಳಲ್ಲಿ ಕಾಡು ಪ್ರಾಣಿಗಳ ದಾಳಿಗೆ ನಲುಗಿ ಬೇಸತ್ತಿದ್ದ ಜನತೆಗೆ ಶಾಸಕ ದರ್ಶನ್ ಧೃವನಾರಾಯಣ್ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿದ್ದಾರೆ.ಗಡಿಭಾಗಗಳಲ್ಲಿ ನುಸುಳುತ್ತಿದ್ದ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಆನೆಕಂದಕ ಹಾಗೂ ರೈಲ್ವೆಕಂಬಿ ಬೇಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ.ಸುಮಾರು 11.70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಮಗಾರಿಗೆ ಚಾಲನೆ ದೊರೆತಿದೆ
ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇಂದು ಚುರುಕು ನೀಡಲಾಗಿದೆ.ಧೃವನಾರಾಯಣ್ ರವರು ಈ ಯೋಜನೆಗಾಗಿ ಸಾಕಷ್ಟು
ಶ್ರಮವಹಿಸಿದ್ದರು.ತಂದೆಯ ಮಹತ್ವದ ಕಾರ್ಯಕ್ಕೆ ಪುತ್ರ ದರ್ಶನ್ ಧೃವನಾರಾಯಣ್ ಪೂರೈಸಿದ್ದಾರೆ.ಓಂಕಾರ ಅರಣ್ಯವಲಯದಿಂದ ಬಳ್ಳೂರು ಹುಂಡಿ ನಾಗಣಾಪುರ ಹಾದನೂರು ಒಡೆಯನಪುರ ಈರೇಗೌಡನಹುಂಡಿ ಅಂಜನಾಪುರ ಗ್ರಾಮಗಳ ಮೂಲಕ ನುಸುಳಿ ಬರುತ್ತಿದ್ದ ಆನೆಗಳು ಸಾಕಷ್ಟು ನಷ್ಟ ಉಂಟುಮಾಡುತ್ತಿದ್ದವು.ಜೀವಗಳನ್ನೂ ಸಹ ಬಲಿ ಪಡೆಯುತ್ತಿದ್ದವು.ಕರ್ನಾಟಕ ಅರಣ್ಯ ಅಭಿವೃದ್ದಿ ಯೋಜನೆ ಅಡಿಯಲ್ಲಿ 11.70 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ.ಸುಮಾರು 50 ಕ್ಕೂ ಹೆಚ್ಚು ಗ್ರಾಮಗಳ ನಿವಾಸಿಗಳಿಗೆ ಆನೆಗಳ ಉಪಟಳದಿಂದ ಮುಕ್ತಿ ದೊರೆಯಲಿದೆ.ಕಾಮಗಾರಿ 8 ಕಿ.ಮೀ. ನಷ್ಟು ನಡೆಯಲಿದ್ದು ಅಲ್ಲಿನ ಗ್ರಾಮದ ಜನತೆಗೆ ಶಾಶ್ವತ ಪರಿಹಾರ ದೊರೆಯಲಿದೆ.ಕಾಮಗಾರಿ ಚಾಲನೆ ನೀಡುವ ವೇಳೆ ಓಂಕಾರ ವಲಯ ಅರಣ್ಯಾಧಿಕಾರಿ ಸತೀಶ್,ನಂಜನಗೂಡು ಅರಣ್ಯ ಇಲಾಖೆ ಅಧಿಕಾರಿ ನಿತಿನ್ ,ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹಾಜರಿದ್ದರು..