ಸ್ಮಶಾನದಲ್ಲಿ ಗಾಂಜಾ ಗಮ್ಮತ್ತು…ರಾಜಾರೋಷವಾಗಿ ಧಂ ಎಳೆಯುವ ವ್ಯಸನಿಗಳು…ದೂರು ನೀಡಿದ್ರೂ ಕ್ಯಾರೆ ಎನ್ನದ ಪೊಲೀಸ್ರು…ಮೇಟಗಳ್ಳಿ ಸ್ಮಶಾನದ ದುಃಸ್ಥಿತಿ…

ಸ್ಮಶಾನದಲ್ಲಿ ಗಾಂಜಾ ಗಮ್ಮತ್ತು…ರಾಜಾರೋಷವಾಗಿ ಧಂ ಎಳೆಯುವ ವ್ಯಸನಿಗಳು…ದೂರು ನೀಡಿದ್ರೂ ಕ್ಯಾರೆ ಎನ್ನದ ಪೊಲೀಸ್ರು…ಮೇಟಗಳ್ಳಿ ಸ್ಮಶಾನದ ದುಃಸ್ಥಿತಿ…

ಮೈಸೂರು,ಫೆ16,Tv10 ಕನ್ನಡ

ಮೃತಪಟ್ಟವರ ಆತ್ಮ ಚಿರಶಾಂತಿಗೆ ಜಾರಬೇಕಾದ ಸ್ಮಶಾನ ಗಾಂಜಾ ವ್ಯಸನಿಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ.ಹಗಲು ಇರುಳೆನ್ನದೆ ಬೈಕ್ ನಲ್ಲಿ ಬರುವ ವ್ಯಸನಿಗಳು ಸ್ಮಶಾನ ಹಾಗೂ

ಅಕ್ಕಪಕ್ಕದಲ್ಲಿರು ಪೊದೆಗಳ ಆಶ್ರಯ ಪಡೆದು ರಾಜಾರೋಷವಾಗಿ ಗಾಂಜಾ ಸೇವನೆ ಮಾಡುತ್ತಿದ್ದಾರೆ.ಈ ಬಗ್ಗೆ ಸ್ಥಳೀಯರಾದ ಬಿ.ಎನ್.ನಾಗೇಂದ್ರ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ.ಮೃತಪಟ್ಟವರು ಚಿರನಿದ್ರೆಗೆ ಜಾರಬೇಕಾದ ಸ್ಥಳವೀಗ ಗಾಂಜಾ ವ್ಯಸನಿಗಳ ಗಮ್ಮತ್ತಿಗೆ ಬಲಿಯಾಗುತ್ತಿದೆ

ಹೌದು…ಇದು ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ಹಾಗೂ ವಾರ್ಡ್ ನಂ.7 ರ ವ್ಯಾಪ್ತಿಯಲ್ಲಿ ಬರುವ ಸ್ಮಶಾನದ ದುಃಸ್ಥಿತಿ.ಸ್ಮಶಾನದ ಅಭಿವೃದ್ದಿಗಾಗಿ ಮೈಸೂರು ಮಹಾನಗರಪಾಲಿಕೆ ಲಕ್ಷಾಂತರ ರೂ ಖರ್ಚು ಮಾಡಿದೆ.ಹೈ ಮಾಸ್ಕ್ ಸೇರಿದಂತೆ ದೀಪಗಳನ್ನ ಅಳವಡಿಸಿದೆ.ಕಳೆದ ಮೂರು ತಿಂಗಳಿಂದ ಇಲ್ಲಿನ ದೀಪಗಳು ಬೆಳಕು ನೀಡುವುದನ್ನ ಸ್ಥಗಿತಗೊಳಿಸಿದೆ.ಕತ್ತಲನ್ನೇ ಬಳಸಿಕೊಳ್ಳುತ್ತಿರುವ ಗಾಂಜಾ ವ್ಯಸನಿಗಳು ರಾಜಾರೋಷವಾಗಿ ಸ್ಮಶಾನಕ್ಕೆ ಪ್ರವೇಶಿಸಿ ಧಂ ಎಳೆದು ಮತ್ತೇರಿಸಿಕೊಳ್ಳುತ್ತಿದ್ದಾರೆ.ಸ್ಮಶಾನದ ಪಕ್ಕದಲ್ಲೇ ಇರುವ ಆಲದ ಮರದ ಕೆಳಗೆ ಧಂ ಎಳೆಯುವ ದೃಶ್ಯ ಪ್ರತಿನಿತ್ಯ ಕಾಣಿಸುತ್ತಿದೆ.ಪಕ್ಕದಲ್ಲೇ ಹಾದು ಹೋಗಿರುವ ರೈಲ್ವೆ ಹಳಿಯನ್ನೂ ಬಿಡದ ವ್ಯಸನಿಗಳು ಹಳಿ ಮೇಲೇ ಕುಳಿತು ಧಂ ಎಳೆಯುತ್ತಿದ್ದಾರೆ.ಲಕ್ಷಾಂತರ ರೂ ಖರ್ಚು ಮಾಡಿ ಅಭಿವೃದ್ದಿ ಪಡಿಸಿದ ಸ್ಮಶಾನ ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ.ಗಾಂಜಾ ವ್ಯಸನಿಗಳನ್ನ ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ನಡೆದ ಪ್ರಕರಣಗಳೂ ನಡೆದಿವೆ.ಈ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *